ಕೋಲ್ಕತ: ವಿಶ್ವಕಪ್ ಪೂರ್ವ ಹಾಗೂ ಒಲಿಂಪಿಕ್ ಪೂರ್ವ ಟೂರ್ನಿಗಳಲ್ಲಿ ಅಂಪೈರ್ ಆಗಿದ್ದ ಕೋಲ್ಕತ ಮೂಲದ ಫಿಫಾ ಮಾಜಿ ರೆಫರಿ ಸುಮಂತ ಘೋಷ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು ಮತ್ತು ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
“ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದರು.
ಏಪ್ರಿಲ್ 10, 1952 ರಂದು ಜನಿಸಿದ ಘೋಷ್ 1990 ರಲ್ಲಿ ಫಿಫಾ ರೆಫರಿಯಾದರು ಮತ್ತು 1997 ರಲ್ಲಿ ನಿವೃತ್ತರಾದರೂ. ಅವರು ಪೂರ್ವ ವಿಶ್ವ ಕಪ್ ಮತ್ತು ಪೂರ್ವ ಒಲಿಂಪಿಕ್ಸ್ ಪಂದ್ಯಾವಳಿಗಳು, ಎ ಎಫ್ ಸಿ ಕ್ಲಬ್ ಚಾಂಪಿಯನ್‌ಶಿಪ್‌ಗಳು, ಎಸ್ ಎಎಫ್ ಎಫ್ ಕಪ್ ಮತ್ತು ಜವಾಹರಲಾಲ್ ನೆಹರು ಕಪ್‌ನಲ್ಲಿ ಕಾರ್ಯನಿರ್ವಹಣೆ ಮಾಡಿದ್ದರು.ನಿವೃತ್ತಿಯ ನಂತರ, ಘೋಷ್ ರೆಫರಿಗಳ ಬೋಧಕ ಮತ್ತು ಎ ಐ ಎಫ್ ಎಫ್ ಮ್ಯಾಚ್ ಕಮಿಷನರ್ ಆದರು.
ಸುಮಂತ-ದಾ ಇನ್ನಿಲ್ಲ ಎಂದು ಕೇಳಲು ನಿಜವಾಗಿಯೂ ದುಃಖವಾಗಿದೆ. ಅವರು ಭಾರತೀಯ ತೀರ್ಪುಗಾರರಾಗಿದ್ದರು ಮತ್ತು ಆಟಕ್ಕೆ ಅವರ ಅಮೂಲ್ಯ ಕೊಡುಗೆ ಯಾವಾಗಲೂ ನಮ್ಮೊಂದಿಗೆ ಇರುತ್ತದೆ. ಅವರ ಕುಟುಂಬದೊಂದಿಗೆ ನಾನು ದುಃಖವನ್ನು ಹಂಚಿಕೊಳ್ಳುತ್ತೇನೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಸಂತಾಪ ಸೂಚಿಸಿದ್ದಾರೆ.