Advertisement

ಕ್ರಿಕೆಟ್‌ ಆಸ್ಟ್ರೇಲಿಯ ಸಿಇಒ ಹುದ್ದೆಗೆ ಇಂಗ್ಲೆಂಡಿನ ಮಾಜಿ ನಾಯಕ ಸ್ಟ್ರಾಸ್‌ ನೇಮಕ?

01:48 AM Jun 19, 2020 | Sriram |

ಮೆಲ್ಬರ್ನ್: ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಸಂಭವಿಸುತ್ತಿದೆ. “ಕ್ರಿಕೆಟ್‌ ಆಸ್ಟ್ರೇಲಿಯ’ದ (ಸಿಎ) ನೂತನ ಸಿಇಒ ಹುದ್ದೆಗೆ ಇಂಗ್ಲೆಂಡಿನ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್‌ ಅವರನ್ನು ನೇಮಿಸಲಾಗುತ್ತದೆ ಎಂಬ “ಬ್ರೇಕಿಂಗ್‌ ನ್ಯೂಸ್‌’ ಹೊರಬಿದ್ದಿದೆ!

Advertisement

ಇತ್ತೀಚೆಗಷ್ಟೇ ಕೆವಿನ್‌ ರಾಬರ್ಟ್ಸ್ ಅವರನ್ನು ಈ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ನಿಕ್‌ ಹಾಕ್ಲಿ ಉಸ್ತುವಾರಿ ಸಿಇಒ ಆಗಿದ್ದಾರೆ. ಖಾಯಂ ಸಿಇಒ ಸ್ಥಾನಕ್ಕೆ ದೇಶ-ವಿದೇಶಗಳ ಅಭ್ಯರ್ಥಿಯನ್ನೂ ಪರಿಗಣಿಸಲಾಗುವುದು ಎಂದು ಸಿಎ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್‌ ಹೇಳಿದ್ದರು.

ಆಂಡ್ರ್ಯೂಸ್ಟ್ರಾಸ್‌ 2009, 2010-11ರ ಆ್ಯಶಸ್‌ ವಿಜೇತ ಇಂಗ್ಲೆಂಡ್‌ ತಂಡದ ನಾಯಕರಾಗಿದ್ದನ್ನು ಮರೆಯುವಂತಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next