Advertisement

ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಡೇವಿಡ್‌ ಕ್ಯಾಪೆಲ್‌ ನಿಧನ

05:55 PM Sep 03, 2020 | mahesh |

ಲಂಡನ್: ಇಂಗ್ಲೆಂಡಿನ ಮಾಜಿ ಕ್ರಿಕೆಟ್‌ ಆಲ್‌ರೌಂಡರ್‌ ಡೇವಿಡ್‌ ಕ್ಯಾಪೆಲ್‌ (57) ಬುಧವಾರ ನಿಧನ ಹೊಂದಿದರು. ಅವರು 2018ರಲ್ಲಿ ಬ್ರೇನ್‌ ಟ್ಯೂಮರ್‌ ಶಸ್ತ್ರಚಿಕಿತ್ಸೆಗೆ ಒಳಗಾದರೂ ಪೂರ್ತಿ ಗುಣಮುಖರಾಗಿರಲಿಲ್ಲ.

Advertisement

ಕ್ಯಾಪೆಲ್‌ 1987-1990ರ ಅವಧಿಯಲ್ಲಿ ಇಂಗ್ಲೆಂಡ್‌ ಪರ 15 ಟೆಸ್ಟ್‌ ಮತ್ತು 23 ಏಕದಿನ ಪಂದ್ಯಗಳನ್ನಾಡಿದ್ದರು. ಟೆಸ್ಟ್‌ನಲ್ಲಿ 374 ರನ್‌ ಮತ್ತು 21 ವಿಕೆಟ್‌; ಏಕದಿನದಲ್ಲಿ 327 ರನ್‌ ಮತ್ತು 17 ವಿಕೆಟ್‌ ಗಳಿಸಿದ್ದು ಕ್ಯಾಪೆಲ್‌ ಸಾಧನೆಯಾಗಿದೆ. 1981-1998ರ ಅವಧಿಯಲ್ಲಿ ನಾರ್ತಂಪ್ಟನ್‌ಶೈರ್‌ ಪರ 270 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಕ್ಯಾಪೆಲ್‌ 12,202 ರನ್‌ ಹಾಗೂ 546 ವಿಕೆಟ್‌ ಸಂಪಾದಿಸಿದ್ದಾರೆ. ಇದರಲ್ಲಿ 16 ಶತಕಗಳು ಸೇರಿವೆ.

ಕ್ಯಾಪೆಲ್‌ 1987ರ ಜುಲೈಯಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧ ಲೀಡ್ಸ್‌ನಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸಿದರು. ಇದರೊಂದಿಗೆ 77 ವರ್ಷಗಳ ಬಳಿಕ ನಾರ್ತಂಪ್ಟನ್‌ಶೈರ್‌ನಲ್ಲಿ ಜನಿಸಿದ ಆಟಗಾರನೊಬ್ಬ ಇಂಗ್ಲೆಂಡ್‌ ಪರ ಟೆಸ್ಟ್‌ ಆಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next