Advertisement

ಕಾಂಗ್ರೆಸ್ ಅವಧಿಗಿಂತಲೂ ಬಿಜೆಪಿ ಅವಧಿ ಶೋಚನೀಯವಾಗಿದೆ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ

03:38 PM Oct 09, 2020 | keerthan |

ಬಳ್ಳಾರಿ: ಉತ್ತರ ಪ್ರದೇಶದ ಹತ್ರಾಸ್ ಪ್ರಕರಣದಲ್ಲಿ ನಲ್ಲಿ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಕುಟುಂಬದವರಿಗೆ ಮೃತ ಶರೀರವನ್ನೇ ನೀಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವಾಗ ಸಾಕಷ್ಟು ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್ ಅವಧಿಗಿಂತಲೂ ಬಿಜೆಪಿ ಅವಧಿ ಶೋಚನೀಯವಾಗಿದೆ ಎಂದು ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ದೇಶದಲ್ಲಿ ಅಭದ್ರತೆ ಕಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಪಾಲು ದೊಡ್ಡದಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೂ ಹರಿಹಾಯ್ದರು.

ಅಧಿಕಾರಿಗಳ ಆತ್ಮಹತ್ಯೆ ಮತ್ತು ಸಾವಿನಲ್ಲಿ ಇತ್ತೀಚೆಗೆ ರಾಜಕೀಯವೇ ತುಂಬಿದೆ. ಇದು ಮೊದಲು ನಿಲ್ಲಬೇಕು. ಹತ್ರಾಸ್ ಪ್ರಕರಣದಲ್ಲಿ ಸಹ ರಾಜಕೀಯ ನಡೆಯುತ್ತಿದೆ. ಹತ್ರಾಸ್ ವಿಷಯದಲ್ಲಿ ರಾಜಕೀಯ ಒತ್ತಡ ಹಾಕಲಾಗುತ್ತಿದೆ ಎಂದು ಅನುಪಮಾ ಶೆಣೈ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next