ಸಿಂದಗಿ: ಕಾಂಗ್ರೆಸ್ ಪಕ್ಷದ ಉದ್ದೇಶ ಅಭಿವೃದ್ಧಿ. ಆದರೆ ಇಂದಿನ ರಾಜಕೀಯ ವ್ಯವಸ್ಥೆ ನೋಡಿದಾಗ ಜಾತಿ, ಧರ್ಮ, ವೈಯಕ್ತಿಕ ಟೀಕೆ ಮಾಡುವುದು ಕಂಡು ಬರುತ್ತಿವೆ. ಇವೆಲ್ಲ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಅಭಿವೃದ್ಧಿಗೆ ಕಂಠಕವಾಗಿವೆ. ಆದ್ದರಿಂದ ಅಭಿವೃದ್ಧಿ ಚಿಂತನೆ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮಾಜಿ ಸಚಿವ ಡಾ| ಎಚ್.ಸಿ. ಮಹಾದೇವಪ್ಪ ಹೇಳಿದರು.
ಶುಕ್ರವಾರ ತಾಲೂಕಿನ ಕೋರಹಳ್ಳಿ ಗ್ರಾಮದಲ್ಲಿ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಧರ್ಮ ಆಧಾರಿತ ರಾಜಕಾರಣದಿಂದ ರಾಜಕೀಯ ನಿಯಂತ್ರಣ ಮಾಡುವುದು. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ಅಪಾಯದಲಿದೆ. ಪ್ರಜಾಪ್ರಭುತ್ವ ವಿಫವಾಗುತ್ತಿದೆ. ಬಿಜೆಪಿ ಕೋಮುವಾದದ ಆಡಳಿತ ನಡೆಸುತ್ತಿದೆ. ಕೇಸರಿಕರಣ ಮಾಡುತ್ತಿದೆ. ಆದ್ದರಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಭ್ಯರ್ಥಿ ಅಶೋಕ ಮನಗೂಳಿ ಅವರನ್ನು ಗೆಲ್ಲಿಸಿ ಎಂದು ಹೇಳಿದರು.
ಬಿಜೆಪಿ ಸರಕಾರ ಸುಳ್ಳು ಹೇಳುವ ಸರಕಾರ. ಈ ಸರಕಾರದಲ್ಲಿ ಜನ ಸಾಮಾನ್ಯರು ಬದುಕುವುದು ಕಷ್ಟಕರವಾಗಿದೆ. ಆದ್ದರಿಂದ ಜನಸಾಮಾನ್ಯರ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಸಿಂದಗಿ ಉಪಚುನಾವಣೆಯು ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಜೆಡಿಎಸ್ ಲೆಕ್ಕಕ್ಕಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಮತಗಳೇನು ಇಲ್ಲ. ಎಂ.ಸಿ. ಮನಗೂಳಿ ಅವರು ತಮ್ಮ ವರ್ಚಸ್ಸಿನ ಮೇಲೆ ಮತಗಳನ್ನು ಪಡೆದಿದ್ದರು. ಅವರು ಕ್ಷೇತ್ರದಲ್ಲಿ ಎಲ್ಲ ಸಮಾಜ ಮತ್ತು ಧರ್ಮದವರೊಂದಿಗೆ ಒಳ್ಳೆ ಬಾಂಧವ್ಯವನ್ನು ಹೊಂದಿದ್ದರು. ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ. ಅವರಂತೆ ಅವರ ಮಗ ಅಶೋಕ ಮನಗೂಳಿ ಕಾಂಗ್ರೆಸ್ ಪಕ್ಷದಿಂಧ ಸ್ಪರ್ಧಿಸಿದ್ದು ಅವರಿಗೆ ಮತ ನೀಡಿ ಎಂದು ಹೇಳಿದರು.
ವೈ.ಸಿ. ಮಯೂರ, ಚಂದ್ರಕಾಂತ ಸಿಂಗೆ, ರಮೇಶ ಮೋರಟಗಿ, ಶಿವಪುತ್ರ ಗಬಸಾವಳಗಿ, ರಾಜು, ಭಾರತಿ ಹೊಸಮನಿ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.