Advertisement
ಈ ಮೂಲಕ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಪತ್ರಕ್ಕೆ ಸರ್ಕಾರ ಯಾವುದೇ ಕಿಮ್ಮತ್ತು ನೀಡಿಲ್ಲ ಎನ್ನುವಂತಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ಪರಿಣಿತರಾದ ಎಲ್ಲ ವರ್ಗದವರನ್ನು ಸಿಂಡಿಕೇಟ್ ಸದಸ್ಯರು, ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನಾಗಿ ನೇಮಿಸಲಾಗಿದೆ.
Related Articles
Advertisement
ಹಂಪಿ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳ ಕಾರ್ಯಕಾರಿ ಸಮಿತಿ, ಕಾರ್ಯಕಾರಿ ಪರಿಷತ್, ಆಡಳಿತ ಮಂಡಳಿಗಳಿಗೆ ಹಿಂದಿನ ಸರ್ಕಾರದಿಂದ ನಾಮನಿರ್ದೇಶನ ಗೊಂಡಿರುವ ಸದಸ್ಯರನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯುವಂತೆ ಜುಲೈ 17ರಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ.
ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಯಲ್ಲಿ ಸಿಂಡಿಕೇಟ್ ಹಾಗೂ ವ್ಯವಸ್ಥಾಪನಾ ಮಂಡಳಿಯೇ ಪ್ರಮುಖವಾಗಿರುತ್ತದೆ. ವಿವಿಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಸಿಂಡಿಕೇಟ್ ಅನುಮತಿ ಅಗತ್ಯವಾಗಿರುತ್ತದೆ. ಸಿಂಡಿಕೇಟ್‌ನಲ್ಲಿ ರಾಜ್ಯಪಾಲರ ಪ್ರತಿನಿಧಿಗಳು, ಸರ್ಕಾರದ ನಾಮನಿರ್ದೇಶಿತ ಸದಸ್ಯರು, ಶಿಕ್ಷಣ ತಜ್ಞರು ಹಾಗೂ ಆಯಾ ವಿವಿಯ ಕುಲಪತಿ, ಕುಲಸಚಿವರು ಮತ್ತು ಹಿರಿಯ ಡೀನ್‌ಗಳು ಇರುತ್ತಾರೆ.
ಈ ಮಧ್ಯೆ, ಹೊಸ ಸರ್ಕಾರ ತಮ್ಮ ಬೆಂಬಲಿಗರನ್ನು ನಾಮನಿರ್ದೇಶನ ಮಾಡುವ ಉದ್ದೇಶದಿಂದ ಹಿಂದಿನ ಸರ್ಕಾರ ನಾಮನಿರ್ದೇಶನ ಮಾಡಿದ್ದವರನ್ನು ಬದಲಾಯಿಸುವುದು ಸರಿಯಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಪರಿಣಿತರನ್ನು ಆಯಾ ಸರ್ಕಾರ ತಮ್ಮ ಧೋರಣೆಗೆ ಅನುಸಾರವಾಗಿ ಬದಲಾಯಿಸಿದರೆ ಶಿಕ್ಷಣ ವ್ಯವಸ್ಥೆಯೇ ಅರ್ಥಹೀನವಾಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರನ್ನು ವಜಾಗೊಳಿಸಿರುವ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸದ್ಯ ಅದರ ಚರ್ಚೆ ಬೇಡ.– ಸಿದ್ದರಾಮಯ್ಯ,
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ.