Advertisement

ಸುಕುಮಾರ್ ಶೆಟ್ರಿಗೆ ಪಕ್ಷ ಎಲ್ಲ ಅವಕಾಶವನ್ನು ಕೊಟ್ಟಿದೆ ಆದರೆ.. ಬಿಎಸ್‌ ವೈ

02:44 PM May 06, 2023 | Team Udayavani |

ಬೈಂದೂರು: ಎಲ್ಲೆಡೆ ಚುನಾವಣ ರಂಗು ಕಾವೇರುತ್ತಿದೆ. ಶನಿವಾರ ಬೈಂದೂರು ಕ್ಷೇತ್ರದ ವಂಡ್ಸೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರ ಭರ್ಜರಿ ಪ್ರಚಾರವನ್ನು ನಡೆಸಿದರು.

Advertisement

ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ,ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ  ಬರುವುದು ನಿಶ್ಚಿತ. 130- 135 ಸ್ಥಾನಗಳನ್ನು ಗೆಲ್ಲುವುದು ಶತಃಸಿದ್ಧ. ಈ ಬಗ್ಗೆ ಯಾವುದೇ ಅನುಮಾನ ಬೇಡ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಲಿಂಗಾಯತ ಮಾತ್ರವಲ್ಲ ಎಲ್ಲ ಜಾತಿಯವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.

ಹಾಲಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ರ ಮುನಿಸು ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಅವರಿಗೆ ನಾವೆಲ್ಲ ಮನವಿ ಮಾಡಿ, ‌ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಅವರ ಹಠ ಬಿಡುತ್ತಿಲ್ಲ. ಪಕ್ಷ ಅವರಿಗೆ ಅವಕಾಶ ಕೊಟ್ಟಿದೆ. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next