ಬೀಜಿಂಗ್ : ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಚೀನಾದ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಚೀನಾದ ಸರ್ಕಾರಿ ಟಿವಿ ಚಾನೆಲ್ ಸಿಸಿಟಿವಿ ವರದಿ ಪ್ರಕಾರ, ಲಿ ಕೆಕಿಯಾಂಗ್ ಶಾಂಘೈನಲ್ಲಿ ಇದ್ದ ಸಂದರ್ಭ ಅಕ್ಟೋಬರ್ 26 ರಂದು ಹಠಾತ್ ಹೃದಯಾಘಾತಕ್ಕೆ ಒಳಗಾದರು ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲು ಮಡಿದ ಎಲ್ಲ ಪ್ರಯತ್ನಗಳು ವಿಫಲವಾದವು ಅಕ್ಟೋಬರ್ 27 ರಂದು ಅವರು ನಿಧನರಾದರು ಎಂದು ಹೇಳಿದೆ.
ಲಿ ಕೆಕಿಯಾಂಗ್ ಅವರು 2013 ರಿಂದ 2023 ರವರೆಗೆ ಚೀನಾದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಲಿ ಅವರು 1955 ರಲ್ಲಿ ಅನ್ಹುಯಿ ಪ್ರಾಂತ್ಯದ ಹೆಫೀಯಲ್ಲಿ ಜನಿಸಿದರು. ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಮಾಜಿ ಪ್ರಾಧ್ಯಾಪಕರಾದ ಚೆಂಗ್ ಹಾಂಗ್ ಅವರನ್ನು ವಿವಾಹವಾದರು.
2022 ರಲ್ಲಿ ಅವರು ನಿವೃತ್ತರಾಗುವವರೆಗೂ, ಅವರು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CCP) ನಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದರು. 2012 ಮತ್ತು 2022 ರ ನಡುವೆ ಪಕ್ಷದ ಪಾಲಿಟ್‌ಬ್ಯೂರೊ ಸದಸ್ಯರಾಗಿ, ಜೊತೆಗೆ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿ ಮಾರುಕಟ್ಟೆ ಸುಧಾರಣೆಗಳಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.
ಚೀನಾದ ಪ್ರತಿಷ್ಠಿತ ಪೀಕಿಂಗ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ ಲಿ ಅವರನ್ನು ಒಮ್ಮೆ ಪಕ್ಷದ ನಾಯಕತ್ವದ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು, ಆದರೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಲಿ ಅವರನ್ನು ದೂರ ಇಡಲು ಪ್ರಾರಂಭಿಸಿದರು.
ಇದನ್ನೂ ಓದಿ: Hanur: ಮುಖ್ಯ ರಸ್ತೆಯಲ್ಲಿಯೇ ಹೆಬ್ಬಾವು ಪ್ರತ್ಯಕ್ಷ; ಸಾರ್ವಜನಿಕರಿಗೆ ಆತಂಕ