Advertisement

ಚಲಿಸುತ್ತಿದ್ದ ರೈಲಿನಲ್ಲಿ ಮಾಜಿ ಬಿಜೆಪಿ ಶಾಸಕನ ಬರ್ಬರ ಹತ್ಯೆ

05:14 AM Jan 08, 2019 | |

 ಅಹಮದಾಬಾದ್‌: ಗುಜಾರಾತ್‌ನ ಮಾಜಿ ಬಿಜೆಪಿ ಶಾಸಕ ಜಯಂತಿಲಾಲ್‌ ಭಾನುಶಾಲಿ ಅವರನ್ನು  ಸೋಮವಾರ ರಾತ್ರಿ ಚಲಿಸುತ್ತಿರುವ ರೈಲಿನಲ್ಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಭುಜ್‌ ನಿಂದ ಅಹಮದಾಬಾದ್‌ಗೆ ಸಂಚರಿಸುತ್ತಿದ್ದ ಸಯಾಜಿ ನಗರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಹತ್ಯೆ ನಡೆದಿದೆ.

Advertisement

ಕಟಾರಿಯಾ ಮತ್ತು ಸುರ್ಬಾರಿ ನಿಲ್ದಾಣಗಳ ಮಧ್ಯೆ ಎಸಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಭಾನುಶಾಲಿ ಅವರನ್ನು ಹತ್ಯೆಗೈಯಲಾಗಿದೆ. ಒಂದು ಗುಂಡು ಎದೆಗೆ ಹೊಕ್ಕಿದ್ದರೆ ,ಇನ್ನೊಂದು ಕಣ್ಣನ್ನು ಸೀಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ರೈಲನ್ನು 2 ಗಂಟೆಗೂ ಹೆಚ್ಚು ಕಾಲ ಮಾಲಿಯಾ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. 

ಕಳೆದ ವರ್ಷ ಮಹಿಳೆಯೊಬ್ಬರು ಭಾನುಶಾಲಿ ಅವರ ವಿರುದ್ಧ ಮಹಿಳೆಯೊಬ್ಬರು ರೇಪ್‌ ಆರೋಪ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next