Advertisement

2007ರ ಟಿ20 ವಿಶ್ವಕಪ್‌ ವಿಜೇತ ತಂಡದ ಮ್ಯಾನೇಜರ್‌ ಸುನಿಲ್‌ದೇವ್‌ ನಿಧನ

12:22 AM Aug 04, 2023 | Team Udayavani |

ಹೊಸದಿಲ್ಲಿ: ದಿಲ್ಲಿ ಡಿಡಿಸಿಎ(Delhi and District Cricket Association) ಮಾಜಿ ಕಾರ್ಯದರ್ಶಿ ಸುನಿಲ್‌ ದೇವ್‌ (75) ಅವರು ದೀರ್ಘ‌ಕಾಲದ ಅನಾರೋಗ್ಯದಿಂದಾಗಿ ಆ. 2ರಂದು ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Advertisement

70ರ ದಶಕದಿಂದ 2015ರ ವರೆಗೆ ಡಿಡಿಸಿಎಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಕ್ರೀಡಾ ಆಡಳಿತಾಧಿಕಾರಿಯಾಗಿ ಭಾರತೀಯ ಕ್ರಿಕೆಟ್‌ ಮಂಡಳಿಯ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನ 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದಾಗ ಅವರು ತಂಡದ ಮ್ಯಾನೇಜರ್‌ ಆಗಿರುವುದು ಅವರ ಬಾಳ್ವೆಯ ಮಹೋನ್ನತ ಕ್ಷಣವಾಗಿತ್ತು.

1996ರ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು 2014ರ ಇಂಗ್ಲೆಂಡ್‌ ಪ್ರವಾಸದ ವೇಳೆ ಅವರು ತ,ಡದ ಆಡಳಿತ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next