Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಪಕ್ಷ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಗರ್‌ಹುಕುಂ ಕಾಯ್ದೆ ಜಾರಿಗೆ ಬರಲು ಹೋರಾಟ ಮಾಡಿದ್ದು ಬಿ.ಎಸ್.ಯಡಿಯೂರಪ್ಪನವರಾದರೆ ಕಾಯ್ದೆ ಜಾರಿಗೆ ತಂದಿದ್ದು ಮಾತ್ರ ಎಸ್.ಬಂಗಾರಪ್ಪ. ಕರೂರು ಭಾರಂಗಿ ಹೋಬಳಿಯಲ್ಲಿ ಅಭಯಾರಣ್ಯ ಕಾಯ್ದೆ ಜಾರಿಗೆ ತಂದಾಗ ಸಹ ಕಾಂಗ್ರೆಸ್ ಪಕ್ಷ ಮತ್ತು ಕಾಗೋಡು ತಿಮ್ಮಪ್ಪ ಅಧಿಕಾರದಲ್ಲಿದ್ದರು. ಇನಾಂ ಜಮೀನು ಸಮಸ್ಯೆ ಬಗೆಹರಿಸುವಲ್ಲಿ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ್ಯೂ ವಿಫಲವಾಗಿದ್ದಾರೆ. ಈ ರೀತಿ ರೈತ ವಿರೋಧಿಯಾದ ಎಲ್ಲ ಕಾಯ್ದೆ ಜಾರಿಗೆ ಬರುವಾಗ ಮೌನವಾಗಿದ್ದ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ತೀ.ನ.ಶ್ರೀನಿವಾಸ್, ಬಿ.ಆರ್.ಜಯಂತ್ ಈಗ ರೈತರ ಪರವಾಗಿ ತಾವಿದ್ದೇವೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಚರ್ಚೆಗೆ ಬರಲಿ. ಕಾಂಗ್ರೆಸ್ ಕಾಲಕಾಲಕ್ಕೆ ಜಾರಿಗೆ ತಂದಿರುವ ರೈತ ವಿರೋಧಿ ಎಲ್ಲ ಕಾಯ್ದೆಗಳ ದಾಖಲೆ ಸಹಿತ ನಾನು ಚರ್ಚೆಗೆ ಬರುತ್ತೇನೆ ಎಂದು ಸವಾಲು ಎಸೆದರು.
Related Articles
Advertisement
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಯಾವೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರಾಜ್ಯ ಸರ್ಕಾರ 2020 ರ ಏಪ್ರಿಲ್ 10 ರಂದು ಭೂಕಬಳಿಕೆ ನಿಷೇದ ಕಾಯ್ದೆಗೆ ತಿದ್ದುಪಡಿ ತಂದಿದ್ದು, ನೋಟಿಸ್ ಬಂದ ರೈತರು ಈ ರಾಜ್ಯಪತ್ರವನ್ನು ನ್ಯಾಯವಾದಿಗಳ ಮೂಲಕ ಭೂಕಬಳಿಕೆ ನಿಷೇಧ ನ್ಯಾಯಾಲಯಕ್ಕೆ ಸಲ್ಲಿಸಿದರೆ ಪ್ರಕರಣ ವಜಾಗೊಳಿಸಲಾಗುತ್ತದೆ ಎಂದು ಕಣ್ಣೂರು ಸಲಹೆ ನೀಡಿದ್ದಾರೆ.
ಭೂಕಬಳಿಕೆ ನಿಷೇದ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ನೋಟಿಸ್ ಪಡೆದ ರೈತರು ರಾಜ್ಯಪತ್ರವನ್ನು ನ್ಯಾಯವಾದಿಗಳ ಮೂಲಕ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದರೆ ಪ್ರಕರಣದಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಶಾಸಕ ಹಾಲಪ್ಪ ಹರತಾಳು ತಾಲೂಕಿನ ರೈತರಿಗೆ ಅರಣ್ಯ ಇಲಾಖೆ ನೀಡಿದ 400 ಕ್ಕೂ ಹೆಚ್ಚು ನೋಟಿಸ್ ಸಂಗ್ರಹಿಸಿದ್ದು, ಮುಖ್ಯಮಂತ್ರಿಗಳಿಗೆ ಇದನ್ನು ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.