Advertisement
ಸಮಿತಿಗೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಸಂಚಾಲಕರಾಗಿದ್ದು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸುಬ್ಬನರಸಿಂಹ ಅವರು ಸಹ ಸಂಚಾಲಕರಾಗಿದ್ದಾರೆ. ಮಾಧ್ಯಮ ವಿಭಾಗಕ್ಕೆ ಎ.ಎಚ್.ಆನಂದ್ ಸಂಚಾಲಕರಾಗಿದ್ದು, ಎಸ್.ಪ್ರಕಾಶ್ ಸಹ ಸಂಚಾಲಕರಾಗಿದ್ದಾರೆ. ಮಾಧ್ಯಮ ಸಮನ್ವಯ ವಿಭಾಗದ ಪ್ರಮುಖ್ ಆಗಿ ಎಂ.ಎಚ್. ಶ್ರೀಧರ್ ಅವರನ್ನು ನೇಮಿಸಲಾಗಿದೆ. ಹಣಕಾಸು ನಿರ್ವಹಣೆ ವಿಭಾಗದ ಪ್ರಮುಖ್ ಸುಬ್ಬನರಸಿಂಹ, ಸಹ ಪ್ರಮುಖ್ ಲೆಹರ್ ಸಿಂಗ್ ನೇಮಕಗೊಂಡಿದ್ದಾರೆ. ಪ್ರಣಾಳಿಕೆ ವಿಭಾಗದ ಸಂಚಾಲಕರಾಗಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಸಹ ಸಂಚಾಲಕರಾಗಿ ಡಾ.ಅಶ್ವತ್ಥ ನಾರಾಯಣ, ನಿವೃತ್ತ ಐಎಎಸ್ ಅಧಿಕಾರಿಗಳಾದ ಮದನ್ ಗೋಪಾಲ್, ಸಿ.ಸೋಮಶೇಖರ್, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,ರವೀಂದ್ರಪೈ ನೇಮಕವಾಗಿದ್ದಾರೆ.
Advertisement
ಬಿಜೆಪಿ ನಿರ್ವಹಣಾ ಸಮಿತಿ ರಚನೆ
12:30 AM Mar 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.