Advertisement
ಕಂದಾಯ ಆಯುಕ್ತಾಲಯ ರಚನೆಯ ಸಂಬಂಧ 2018ರಲ್ಲಿ ಏಕಸದಸ್ಯ ಸಮಿತಿ ನೀಡಿದ್ದ ವರದಿ, 2019-20ನೇ ಸಾಲಿನ ಬಜೆಟ್ ಘೋಷಣೆ ಹಾಗೂ ಕರ್ನಾಟಕ ಆಡಳಿತ ಸುಧಾರಣ ಆಯೋಗ-2ರ ಶಿಫಾರಸನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವ ರಾಜ್ಯ ಸರಕಾರವು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯ ರಚಿಸಿ ಆದೇಶ ಹೊರಡಿಸಿದೆ.
Related Articles
ಆಡಳಿತ ಸುಧಾರಣ ಆಯೋಗ ಏನು ಹೇಳಿತ್ತು.
Advertisement
ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಂದಾಯ ಆಯುಕ್ತಾಲಯ ಇದೆ. ನಮ್ಮ ರಾಜ್ಯದಲ್ಲೇ ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಕೃಷಿ, ಮುಜರಾಯಿ, ಅಬಕಾರಿ, ಕಾಲೇಜು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖೆಗಳ ದಿನನಿತ್ಯದ ಆಡಳಿತವನ್ನು ನೋಡಿಕೊಳ್ಳಲು ಮತ್ತು ರಾಜ್ಯ ಸರಕಾರದೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ಮಟ್ಟದಲ್ಲಿ ಆಯುಕ್ತರಿದ್ದಾರೆ. ಅದೇ ಮಾದರಿಯಲ್ಲಿ ಕಂದಾಯ ಆಯುಕ್ತಾಲಯ ರಚಿಸುವುದು ಸೂಕ್ತ ಎಂದು 2ನೇ ಆಡಳಿತ ಸುಧಾರಣ ಆಯೋಗದ ಮೊದಲ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.
ಆಯುಕ್ತಾಲಯದ ಜವಾಬ್ದಾರಿ ಏನು?ಸೇವಾ ವಿಷಯಗಳ ಸಹಿತ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಮತ್ತು ಸರಕಾರದ ನಡುವೆ ಸಮನ್ವಯ, ವಿಪತ್ತು ನಿರ್ವಹಣೆ, ಭೂಸ್ವಾಧೀನ ಪ್ರಕ್ರಿಯೆಗಳು, ತರಬೇತಿ ನಿರ್ವಹಣೆ, ನ್ಯಾಯಾ ಲಯದ ಪ್ರಕರಣಗಳ ಉಸ್ತುವಾರಿ, ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ಪ್ರಶ್ನೆಗಳಿಗೆ ಕ್ರೋಡೀ ಕೃತ ಮಾಹಿತಿ ಸಲ್ಲಿಕೆ, ಕಾರ್ಯದ ಒತ್ತಡ ಗುರುತಿಸು ವಿಕೆಯ ಜವಾಬ್ದಾರಿಗಳನ್ನು ಕಂದಾಯ ಆಯುಕ್ತಾ ಲಯಕ್ಕೆ ವಹಿಸಬಹುದು ಎಂದು ಏಕಸದಸ್ಯ ಸಮಿತಿ ಶಿಫಾರಸು ಮಾಡಿತ್ತು. ಕೆಲಸದ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸಿ, ದಕ್ಷತೆಯನ್ನು ಹೆಚ್ಚಿಸುವ ಹಾಗೂ ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ನಾಗರಿಕಸ್ನೇಹಿ ವ್ಯವಸ್ಥೆ ತರಲು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯ ರಚಿಸಲಾಗಿದೆ ಎಂದು ಸರಕಾರ ಹೇಳಿದೆ.