Advertisement

ಕನಿಷ್ಠ ಬೆಂಬಲ ಬೆಲೆ ಬಲಪಡಿಸಲು 4 ಉಪ ಸಮಿತಿ ರಚನೆ

12:39 AM Aug 23, 2022 | Team Udayavani |

ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆಯ ಸಮಿತಿಯು ಸೋಮವಾರ ಸಭೆ ನಡೆ ಸಿದೆ. ವಿವಿಧ ವಿಚಾರಗಳ ಪರಿಶೀಲನೆ ಗಾಗಿ ನಾಲ್ಕು ಉಪ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ.

Advertisement

ಕೃಷಿ ಇಲಾಖೆಯ ಮಾಜಿ ಕಾರ್ಯದರ್ಶಿ ಸಂಜಯ್‌ ಅಗರ್ವಾಲ್‌ ಅವರ ನೇತೃತ್ವದಲ್ಲಿ ಸಮಿತಿಯ ಮೊದಲನೇ ಸಭೆ ನಡೆದಿದೆ. ಸಮಿತಿಯಲ್ಲಿ ಒಟ್ಟು 26 ಸದಸ್ಯರಿದ್ದು, ಅದರಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ)ದ ಮೂವರು ಸದಸ್ಯರನ್ನು ಬಿಟ್ಟು ಬೇರೆಲ್ಲರೂ ಸಭೆಯಲ್ಲಿ ಭಾಗವಹಿಸಿದ್ದರು.

ಕನಿಷ್ಠ ಬೆಂಬಲ ಬೆಲೆಯನ್ನು ಇನ್ನಷ್ಟು ಬಲಪಡಿಸುವುದು ಮತ್ತು ಪಾರದರ್ಶಕಗೊಳಿಸುವುದು, ಶೂನ್ಯ ಬಜೆಟ್‌ ಆಧಾರಿತ ಕೃಷಿಯನ್ನು ಉತ್ತೇಜಿಸುವುದು, ದೇಶದಲ್ಲಿ ಬದಲಾಗುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆ ಮಾದರಿಯನ್ನು ನಿರ್ಧರಿಸುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next