Advertisement

ಅನ್ಯ ರಾಜ್ಯಗಳಿಂದ ಬರುವ ಮೀನಿನಲ್ಲಿ ಫೋರ್ಮಲಿನ್‌, ಅಮೋನಿಯ

06:00 AM Jun 24, 2018 | Team Udayavani |

ಕಾಸರಗೋಡು: ಅಗತ್ಯಕ್ಕೆ ತಕ್ಕಷ್ಟು ಮೀನು ಲಭಿಸದಿರುವುದರಿಂದ ಕೇರಳಕ್ಕೆ ಅನ್ಯರಾಜ್ಯಗಳಿಂದ ಬರುವ ಹೆಚ್ಚಿನ ಮೀನು‌ಗಳಿಗೆ ಪೋರ್ಮಲಿನ್‌ ಮತ್ತು ಅಮೋನಿಯಂ ಸೇರಿಸಲಾಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಪ್ರತೀ ವರ್ಷ ಸುಮಾರು 2 ಲಕ್ಷ ಟನ್‌ ಮೀನು ಕೇರಳಕ್ಕೆ ಅನ್ಯರಾಜ್ಯಗಳಿಂದ ಬರುತ್ತಿದ್ದು, ಮೀನು ಕೆಟ್ಟು ಹೋಗದಂತೆ ಇದರಲ್ಲಿ ಬಹುತೇಕ ಪೋರ್ಮಲಿನ್‌ ಮತ್ತು ಅಮೋನಿಯ ಸೇರಿಸಲಾಗುತ್ತಿದೆ. ಈ ಮೀನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

Advertisement

ಫಿಶರೀಸ್‌ ಇಲಾಖೆ ಅಂಕಿಅಂಶದಂತೆ ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ 7.5 ಲಕ್ಷ ಟನ್‌ ಮೀನು ವ್ಯಾಪಾರವಾಗುತ್ತಿದೆ. ಕೇರಳದಲ್ಲಿ ಇಷ್ಟೇ ಪ್ರಮಾಣದಲ್ಲಿ ಮೀನು ಉತ್ಪಾದಿಸಲಾಗುತ್ತಿದೆ. ಆದರೆ ಇದರಲ್ಲಿ ಎರಡು ಲಕ್ಷ ಟನ್‌ ಮೀನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಇದರಿಂದಾಗಿ ಕೇರಳದಲ್ಲಿ ಬಳಸುವಷ್ಟು ಮೀನು ಸಿಗದಿರುವುದರಿಂದ ಇತರ ರಾಜ್ಯಗಳಿಂದ ಮೀನು ಬರುತ್ತಿದೆ. ಕೇರಳದಲ್ಲಿರುವ ಇತರ ರಾಜ್ಯಗಳ ಕಾರ್ಮಿಕರು ಹೆಚ್ಚಾಗಿ ಮೀನು ಬಳಸುವುದರಿಂದ ಮೀನಿನ ಬೇಡಿಕೆ ಅಧಿಕವಾಗಿದೆ.

ಪಶ್ಚಿಮ ಬಂಗಾಳ, ಆಂಧ್ರ, ತಮಿಳುನಾಡು, ಕರ್ನಾಟಕ ಮೊದಲಾದ ರಾಜ್ಯಗಳಿಂದ ಭಾರೀ ಪ್ರಮಾಣದಲ್ಲಿ ಮೀನು ಕೇರಳಕ್ಕೆ ಬರುತ್ತಿದೆ. ಇತರ ರಾಜ್ಯಗಳ ಕಾರ್ಮಿಕರಿಗೆ ಸಿಹಿ ನೀರು ಮೀನುಗಳು ಹೆಚ್ಚು ಇಷ್ಟ. ಸಿಹಿ ನೀರು ಮೀನಿನ ರುಚಿಯನ್ನು ಹೆಚ್ಚೆಚ್ಚು ಕೇರಳೀಯರು ಆಸ್ವಾದಿಸಲಾರಂಭಿಸದಾಗ ಇತರ ರಾಜ್ಯಗಳಿಂದ ಮೀನು ಕೇರಳಕ್ಕೆ ಬರುವುದು ಹೆಚ್ಚಳವಾಯಿತು. ಫ್ರೀಜರ್‌ನಲ್ಲಿ ಮೀನು ತಂದರೆ ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಚಿಲ್ಲರೆ ಮಾರಾಟ ಕೇಂದ್ರದಲ್ಲೂ ಫ್ರೀಜರ್‌ನಲ್ಲಿ ಮೀನನ್ನು ಇರಿಸಬೇಕಾಗುತ್ತದೆ. ಇತರ ರಾಜ್ಯಗಳಿಂದ ಮೀನು ಸಾಗಿಸುವವರು ಲಾರಿ ಮೊದಲಾದ ವಾಹನಗಳಲ್ಲಿ ಫ್ರೀಜರ್‌ ಅಳವಡಿಸಲು ಹೆಚ್ಚಿನ ವೆಚ್ಚ ತಗಲುವುದರಿಂದ ಇಂತಹ ವ್ಯವಸ್ಥೆ ಮಾಡುವುದಿಲ್ಲ. ಬದಲಾಗಿ ವೆಚ್ಚ ಕಡಿಮೆ ಮಾಡಲು ಪೋರ್ಮಲಿನ್‌ ಮತ್ತು ಅಮೋನಿಯ ಸೇರಿಸುತ್ತಾರೆ.ಚೆಕ್‌ ಪೋಸ್ಟ್‌ಗಳಲ್ಲಿ ಮೀನು ವಶಪಡಿಸಿಕೊಂಡು ನಿರಂತರವಾಗಿ ತಪಾಸಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ.

ಮೀನಿಗೆ ರಾಸಾಯನಿಕ ವಸ್ತು ಬಳಸಿಲ್ಲ : ಕರ್ನಾಟಕದಿಂದ ಕಾಸರಗೋಡು-ಕಣ್ಣೂರು ಜಿಲ್ಲೆಗೆ ಬರುವ ಮೀನುಗಳನ್ನು ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ತಪಾಸಣೆ ಮಾಡಿದಾಗ ಮೀನಿಗೆ ರಾಸಾಯನಿಕ ವಸ್ತು ಬಳಸಿದ್ದು ಪತ್ತೆಯಾಗಿಲ್ಲ ಎಂದು ಫುಡ್‌ ಸೇಫ್ಟಿ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.

ಫುಡ್‌ ಸೇಫ್ಟಿ ಸರ್ಕಲ್‌ ಅಧಿಕಾರಿಗಳಾದ ಅನೀಶ್‌ ಫ್ರಾನ್ಸಿಸ್‌, ನಿತ್ಯ ಚಾಕೋ ಮೊದಲಾದವರು ನೇತೃತ್ವದಲ್ಲಿ ಮೀನು ತಪಾಸಣೆ ಮಾಡಲಾಗಿದೆ. ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಶರೀಸ್‌ ಟೆಕ್ನೋಲಜಿಯ ಪೇಪರ್‌ ಸ್ಟಿÅಪ್‌ ಬಳಸಿ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಮೀನಿನ ಲಾರಿಗಳಿಂದ ಸ್ಯಾಂಪಲ್‌ ತೆಗೆದು ತಪಾಸಣೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ಮಾರಕ ರಾಸಾಯನಿಕ ಪದಾರ್ಥ ಕಂಡು ಬಂದಿಲ್ಲ ಎಂಬುದು ವ್ಯಕ್ತವಾಗಿದೆ. ಆಫರೇಶನ್‌ ಸಾಗರ ರಾಣಿ ಎಂಬ ಹೆಸರಿನಲ್ಲಿ ಮೀನು ಸ್ಯಾಂಪಲ್‌ ತಪಾಸಣೆ ಮಾಡಲಾಗಿದೆ.

Advertisement

ಜಾಗೃತಿ ಯೋಜನೆ : ರಾಸಾಯನಿಕ ವಸ್ತು ಬಳಸಿದ ಮೀನಿನ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಫುಡ್‌ ಸೇಫ್ಟಿ ವಿಭಾಗ ಯೋಜನೆ ಸಿದ್ಧಪಡಿಸಿದೆ. ಫುಡ್‌ ಸೇಫ್ಟಿ ಕಮೀಷನರ್‌ ರಾಜ ಮಾಣಿಕ್ಯ ಅವರ ನಿರ್ದೇಶ ಪ್ರಕಾರ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಮೀನಿನ ತಪಾಸಣೆ ನಡೆದಿದೆ. ಪೋರ್ಮಲಿನ್‌ ಬಳಸಿದ ಮೀನನ್ನು ಸೇವಿಸಿದರೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಕ್ಯಾನ್ಸರ್‌ನಂತಹ ಮಾರಕ ರೋಗಗಳು ಕೂಡಾ ಸಾಧ್ಯತೆಯಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಶೀಘ್ರವೇ ಮಾರುಕಟ್ಟೆಗೆ ಪೇಪರ್‌ ಸ್ಟಿÅಪ್‌  
ಮೀನಿಗೆ ಪೋರ್ಮಲಿನ್‌ ಮತ್ತು ಅಮೋನಿಯ ಸೇರಿಸಿದ ಬಗ್ಗೆ ಕಂಡುಕೊಳ್ಳಲು ಪೇಪರ್‌ ಸ್ಟಿÅಪ್‌ ಶೀಘ್ರವೇ ಮಾರುಕಟ್ಟೆಗೆ ತಲುಪಲಿದೆ. ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಶರೀಸ್‌ ಟೆಕ್ನಾಲಜಿ (ಸ್ಟಿಫ್ಟ್‌) ಅಭಿವೃದ್ಧಿಪಡಿಸಿದ ಪೇಪರ್‌ ಸ್ಟಿÅಪ್‌ ಬಳಸಿ  ಭಕ್ಷ್ಯ ಸುರಕ್ಷಾ ಅಧಿಕಾರಿಗಳು ಪ್ರಾಥಮಿಕ ತಪಾಸಣೆ ನಡೆಸುತ್ತಿದ್ದಾರೆ. ಆ ಬಳಿಕ ಸಿಫ್ಟ್‌ನ ಲ್ಯಾಬ್‌ನಲ್ಲಿ ಹೆಚ್ಚಿನ ತಪಾಸಣೆಗೊಳಪಡಿಸಲಾಗುತ್ತಿದೆ.

ಪೇಪರ್‌ ಸ್ಟಿÅಪ್‌ ಕೈಗಾರಿಕೆ ಆಧಾರದಲ್ಲಿ ತಯಾರಿಸಲು ಸಿಫ್ಟ್‌ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಪೋರ್ಮಲಿನ್‌ ಮತ್ತು ಅಮೋನಿಯ ಪರಿಶೋಧಿಸಲು ಪ್ರತ್ಯೆಪ್ರತ್ಯೇಕ ಕಿಟ್‌ಗಳನ್ನು ತಯಾರಿಸುತ್ತಿದೆ. ಮೀನಿನ ಹೊರಭಾಗದಲ್ಲಿ ಪೇಪರ್‌ ಸ್ಟಿÅಫ್‌ ಸವರುವುದರಿಂದ ಮೀನಿನ ಬಣ್ಣದಲ್ಲಿ ಉಂಟಾಗುವ ಬದಲಾವಣೆಯಿಂದ ಮೀನಿಗೆ ಪೋರ್ಮಲಿನ್‌ ಅಥವಾ ಅಮೋನಿಯ ಬಳಸಲಾಗಿದೆ ಎಂದು ತಿಳಿಯಲು ಸಾಧ್ಯವಾಗುವುದು. ಪ್ರಸ್ತುತ ಸಿಫ್ಟ್‌ನಲ್ಲಿ ಇದನ್ನು ತಯಾರಿಸಲಾಗುತ್ತಿದೆಯಾದರೂ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಆದರೂ 25 ಪೇಪರ್‌ ಸ್ಟಿÅಪ್‌ ಕಿಟ್‌ಗೆ ಸುಮಾರು 300 ರೂ. ಬೆಲೆಯನ್ನು ಅಂದಾಜಿಸಲಾಗಿದೆ.

ಯಶಸ್ಸಿಗೆ ಮಾರ್ಗ
ದಿನಗಳ ಹಿಂದೆ ತಮಿಳುನಾಡಿನಿಂದ ಮತ್ತು ಇತರ ರಾಜ್ಯಗಳಿಂದ ತಿರುವನಂತಪುರ ಅಮರವಿಳ ಚೆಕ್‌ಪೋಸ್ಟ್‌ ದಾರಿಯಾಗಿ ಬಂದ 12,000 ಕಿಲೋ ಮೀನಿನಲ್ಲಿ ಮಾರಕ ಅಮೋನಿಯ ಮತ್ತು ಪೋರ್ಮಲಿನ್‌ ಬಳಉ ಸಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಸಹಿತ ಹಲವು ಚೆಕ್‌ಪೋಸ್‌ಗಳಲ್ಲಿ ಮೀನಿನ ತಪಾಸಣೆ ನಡೆಸಲಾಗಿತ್ತು. ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿದಾಗ ಮೀನಿಗೆ ಅಮೋನಿಯ ಮತ್ತು ಪೋರ್ಮಲಿನ್‌ ಬೆರಸಿಲ್ಲ ಎಂದು ತಿಳಿದು ಬಂದಿದೆ
– ಪಿ.ಎ. ಜನಾರ್ದನನ್‌
ಸಹಾಯಕ ಆಯುಕ್ತರು , ಕಾಸರಗೋಡು ಆಹಾರ ಸುರಕ್ಷತೆ

Advertisement

Udayavani is now on Telegram. Click here to join our channel and stay updated with the latest news.

Next