Advertisement

ಮೇಳೈಸಿದ ಈಶ್ವರ್‌, ಅಲ್ಲಾ

10:15 AM Feb 10, 2018 | Karthik A |

ಮುಜಾಫ‌ರ್‌ನಗರ್‌: 2013ರ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ಅವಧಿಯಲ್ಲಿ ಹಿಂದೂ, ಮುಸ್ಲಿಂ ಘನಘೋರ ಕೋಮು ಗಲಭೆಗೆ ಕಾರಣವಾಗಿದ್ದ ಮುಜಾಫ‌ರ್‌ನಗರ್‌ ಜಿಲ್ಲೆಯಲ್ಲಿ ಇದೀಗ ಆ ಕರಾಳ ಘಟನೆಗಳು ಜರುಗಿ ನಾಲ್ಕು ವರ್ಷಗಳ ತರುವಾಯ ಶಾಂತಿಯ ವಾತಾವರಣ ಮೂಡುತ್ತಿದೆ. ಪೊಲೀಸರು, ಪಂಚಾಯ್ತಿಗಳ ಪ್ರಯತ್ನದಿಂದಾಗಿ, ಹೊಡೆದಾಡಿಕೊಂಡಿದ್ದ ಜಾಟ್‌ ಹಾಗೂ ಮುಸ್ಲಿಂ ಸಮುದಾಯಗಳು ಒಂದಾಗಿ ಬಾಳ್ವೆ ನಡೆಸಲು ಸಮ್ಮತಿಸಿದ್ದಾರೆ. 

Advertisement

4 ವರ್ಷಗಳ ನಂತರ, ಪೊಲೀಸರು ಹಾಗೂ ಜನಪ್ರತಿನಿಧಿಗಳ ಸತತ ಪ್ರಯತ್ನದ ಫ‌ಲವಾಗಿ, ಎರಡೂ ಸಮುದಾಯಗಳು ಶಾಂತಿಯಿಂದ ಬಾಳಲು ಒಪ್ಪಿವೆ. ಈ ಹಿಂದಿನ ಅನೇಕ ಸಂಧಾನ ಸಭೆಗಳು ವಿಫ‌ಲವಾಗಿದ್ದರೂ, ಶುಕ್ರವಾರ ಮಹಾಪಂಚಾಯತ್‌ನಲ್ಲಿ ನಡೆದ ಶಾಂತಿ ಸಭೆಯಲ್ಲಿ, ಎರಡೂ ಸಮುದಾಯಗಳು ತಮ್ಮ ನಡುವಿನ ಕಹಿ ಮರೆಯಲು ನಿರ್ಧರಿಸಿದರು. ಇದರ ಸೂಚಕವಾಗಿ, ವೇದಿಕೆ ಮೇಲೆ ಆಗಮಿಸಿ ಜಾಟರು ‘ಅಲ್ಲಾಹು ಅಕ್ಬರ್‌’ ಎಂದು ಪ್ರಾರ್ಥಿಸಿದರೆ, ಮುಸ್ಲಿಮರು ‘ಹರ್‌ ಹರ್‌ ಮಹಾದೇವ್‌’ ಎಂದು ಜಯಕಾರ ಹಾಕಿ, ಶಾಂತಿಯುತ ಸಹಬಾಳ್ವೆಗೆ ಶ್ರೀಕಾರ ಹಾಕಿದ್ದಾರೆ. 

ಏನಿದು ಪ್ರಕರಣ?: ಮುಜಾಫ‌ರ್‌ನಗರ್‌ ಹಿಂಸಾಚಾರ, ಉತ್ತರ ಪ್ರದೇಶದ ಇತಿಹಾಸದಲ್ಲೇ ಅತ್ಯಂತ ಘೋರ ಹಿಂಸಾಚಾರ ಎಂದು ಪರಿಗಣಿಸಲಾಗಿದೆ. ಶಾಮ್ಲಿ ಹಾಗೂ ಮುಜಾಫ‌ರ್‌ನಗರಗಳಲ್ಲಿ ಶುರುವಾದ ಗಲಭೆಗಳು ಪಕ್ಕದ ಕವಾಲ್‌, ಕುಟ್ಬಾ, ಪುರ್‌ ಬಾಲ್ಯಾನ್‌ಗೂ ವ್ಯಾಪಿಸಿತ್ತು. ಆ ಗಲಭೆಗಳಲ್ಲಿ 42 ಮುಸ್ಲಿಮರು, 20 ಹಿಂದೂಗಳು ಸಾವನ್ನಪ್ಪಿದ್ದರು. ಆಗ, ಹಿಂಸಾಚಾರಕ್ಕೆ ಹೆದರಿ ಅನೇಕರು ತಮ್ಮ ವಾಸಸ್ಥಳಗಳನ್ನು ಬಿಟ್ಟು ಓಡಿಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next