ಜೇವರ್ಗಿ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ನಡೆಸಲಾಗುತ್ತಿರುವ ಹೋರಾಟಕ್ಕೆ ಪಕ್ಷಭೇದ ಮರೆತು ಪ್ರತಿಯೊಬ್ಬರೂ ಬೆಂಬಲಿಸಬೇಕೆಂದು ವಿಶ್ವ ಲಿಂಗಾಯತ ಮಹಾಸಭಾ ಸಂಸ್ಥಾಪಕ ಪ್ರೊ| ಸಂಜಯ ಮಾಕಲ್ ಕರೆ ನೀಡಿದರು.
ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಆವರಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೆ.24 ರಂದು ಕಲಬುರಗಿ ನಗರದ ಎನ್.ವಿ. ಕಾಲೇಜಿನ ಮೈದಾನದಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ
ಹೇರಲು ಲಿಂಗಾಯತ ಧರ್ಮ ಸಮನ್ವಯ ಸಮಿತಿ ನೇತೃತ್ವದಲ್ಲಿ ಆಯೋಜಿಸಿರುವ ಐತಿಹಾಸಿಕ 4ನೇ ಹಾರ್ಯಾಲಿಯಲ್ಲಿ ತಾಲೂಕಿನಿಂದ ಸಾವಿರಾರು ಜನ ಭಾಗವಹಿಸಿ ಬೆಂಬಲಿಸಬೇಕು ಎಂದರು.
ಜಾತಿ ರಹಿತ, ವರ್ಣ ವರ್ಗ ರಹಿತ ಹೋರಾಟ ಮಾಡಿದ ವಿಶ್ವಗುರು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡುವ ಕುರಿತು ನಡೆದಿರುವ ಹೋರಾಟಕ್ಕೆ ಅನೇಕ ಅಡೆತಡೆಗಳು ಬಂದರೂ ಎದೆಗುಂದದೇ ಮುನ್ನುಗ್ಗಬೇಕಾಗಿದೆ.
ಸಮಾಜದ ಮುಖಂಡರು ಮುಂದಿನ ಪೀಳಿಗೆಗೆ ಒಳಿತಾಗುವ ದೃಷ್ಟಿಯಿಂದ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಸೊನ್ನದ ಡಾ| ಶಿವಾನಂದ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಅಂಕಲಗಿಯ ಅಭಿನವ ಶ್ರೀ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಗೌಡಪ್ಪಗೌಡ ಪೊಲೀಸ್ ಪಾಟೀಲ, ಭೀಮರಾವ್ ಗುಜಗೊಂಡ, ಉಮಾಕಾಂತ ನಿಗ್ಗುಡಗಿ, ಅಣ್ಣಾರಾವ್ ದೇಶಮುಖ, ರಾಚಣ್ಣ ಹಂಗರಗಿ, ಬಸವರಾಜ ಸಾಸಾಬಾಳ, ಷಣ್ಮುಖಪ್ಪಗೌಡ ಹಿರೇಗೌಡ, ಶಿವನಗೌಡ ಹಂಗರಗಿ, ಸಂಗನಗೌಡ ಗುಳ್ಯಾಳ, ಬಾಪುಗೌಡ ಬಿರಾಳ, ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ನಾಗಣ್ಣ ಹಾಗರಗುಂಡಗಿ, ಶಿವಲಿಂಗ ಹಳ್ಳಿ, ಸಾಹೇಬಗೌಡ ಕಡ್ಲಿ, ಚಂದ್ರಶೇಖರ ಮಲ್ಲಾಬಾದ, ಚಂದ್ರಶೇಖರ ತುಂಬಗಿ, ಭೀಮನಗೌಡ ಪರಗೊಂಡ, ರವಿ ಕೋಳಕೂರ, ವಿಶ್ವನಾಥರೆಡ್ಡಿ ರಾಜಳ್ಳಿ, ಸಂತೋಷ ಬಿರಾಳ, ಶಿವು ಹುಗ್ಗಿ, ನಿಂಗು ಹಳಿಮನಿ ಭಾಗಿಯಾಗಿದ್ದರು.