Advertisement

Forest; ಕಾಡಿನಲ್ಲಿ ಹಾಡಿನ ಸದ್ದು; ಫಾರೆಸ್ಟ್‌ ಒಳಗೆ ಚಿಕ್ಕಣ್ಣ- ಟೀಂ

03:03 PM Jul 08, 2024 | Team Udayavani |

ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ “ಫಾರೆಸ್ಟ್‌’ ಸಿನಿಮಾದ ಹಾಡು ಬಿಡುಗಡೆಯಾಗಿದೆ. “ಓಡೋ ಓಡೋ…’ ಎಂಬ ಹಾಡಿಗೆ ಪುನೀತ್‌ ಆರ್ಯ ಸಾಹಿತ್ಯವಿದೆ. ಕೈಲಾಸ್‌ ಖೇರ್‌ ಹಾಗೂ ಹರ್ಷ ಉಪ್ಪಾರ್‌ ಧ್ವನಿಯಾಗಿದ್ದಾರೆ.

Advertisement

ಧರ್ಮ ವಿಶ್‌ ಹಾಡಿಗೆ ಸಂಗೀತವಿದೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ರಾಜು, ಅನೀಶ್‌ ತೇಜೇಶ್ವರ್‌ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಂದ್ರಮೋಹನ್‌ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್‌ ಅಡ್ವೆಂಚರ್‌ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್‌, ಪ್ರಕಾಶ್‌ ತುಮ್ಮಿನಾಡ್‌, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದೀಪಕ್‌ ರೈ ಪಾಣಾಜೆ ತಾರಾಬಳಗದಲ್ಲಿದ್ದಾರೆ.

ಕಾಂತರಾಜು ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ವಿ ರವಿಕುಮಾರ್‌ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆಯನ್ನು ಅರ್ಜುನ್‌ ಕಿಟ್ಟು ಹೊತ್ತು ಕೊಂಡಿದ್ದಾರೆ. ಈಗಾಗಲೇ ಶೂಟಿಂಗ್‌ ಮುಗಿಸಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next