Advertisement

ಆರು ವರ್ಷದ ಬಳಿಕ ಅರಣ್ಯ ಹೆಚ್ಚಳ

11:37 AM Feb 10, 2018 | |

ಚಿಂಚೋಳಿ: ಕಲಬುರಗಿ ಜಿಲ್ಲೆಯ ಮಿನಿ ಮಲೆನಾಡು ಎಂದು ಕರೆಯಲ್ಪಡುವ ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದ ಆರು ವರ್ಷದ ಬಳಿಕ ಶೇ. 1ರಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಕಲಬುರಗಿ ಪ್ರಾದೇಶಿಕ ಅರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ ಯಾದವ ತಿಳಿಸಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ಯಜೀವಿಧಾಮ 13,500 ಹೆಕ್ಟೇರ್‌ ಅರಣ್ಯಪ್ರದೇಶ ಒಳಗೊಂಡಿದೆ 15,200 ಹೆಕ್ಟೇರ್‌ ಪ್ರಾದೇಶಿಕ ಅರಣ್ಯ ಪ್ರದೇಶ ಹೊಂದಿದೆ. ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಎರಡು ಚೆಕ್‌ ಡ್ಯಾಮ ನಿರ್ಮಿಸಲಾಗಿದೆ. ಇದರಿಂದ ಬೆಳಗ್ಗೆ ಮತ್ತು ಸಂಜೆ ವೇಳೆ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತಿವೆ. ವನ್ಯಜೀವಿ ಧಾಮದಲ್ಲಿ ತೋಳ, ಜಿಂಕೆ, ಚಿಪ್ಪು ಹಂದಿ, ಕಾಡು ಹಂದಿ, ಕೋತಿ, ನವಿಲು ಸಾರಂಗ, ಚುಕ್ಕೆ ಜಿಂಕೆ, ಮುಳ್ಳು ಹಂದಿ ಪುನುಗ ಬೆಕ್ಕು ಕಾಣಬಹುದಾಗಿದೆ ಎಂದು ತಿಳಿಸಿದರು. 

Advertisement

ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆ ತಡೆಯಲು ಸೇರಿಭಿಕನಳ್ಳಿ, ಮಂಡಿಬಸವಣ್ಣ, ಚಿಕ್ಕನಿಂಗದಳ್ಳಿ, ಚಂದ್ರಂಪಳ್ಳಿ, ಗೊಟ್ಟಂಗೊಟ್ಟ ಹತ್ತಿರ ನಿಗ್ರಹ ದಳ ರಚಿಸಲಾಗಿದೆ.  ಚಾವವರಂ ಅರಣ್ಯಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗಾರರ ಮೇಲೆ ನಿಗಾವಹಿಸಲು ಅಲ್ಲಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಅರಣ್ಯಪ್ರದೇಶ ಹತ್ತಿರ ಇರುವ ಹೊಲಗಳ ಬದುವಿಗೆ ಹುಲ್ಲಿಗೆ ಬೆಂಕಿ ಹಚ್ಚುವಾಗ ಅತಿ ಜಾಗೃತ ವಹಿಸಬೇಕಾಗಿದೆ. ಬೆಂಕಿ ಅರಣ್ಯ ಪ್ರದೇಶದೊಳಗೆ ವ್ಯಾಪಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next