Advertisement

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ

10:55 PM Apr 07, 2020 | Hari Prasad |

ಕೀವ್‌ (ಉಕ್ರೇನ್‌) : 33 ವರ್ಷದ ಹಿಂದೆ ಉಕ್ರೇನ್‌ನಲ್ಲಿ ಸಂಭವಿಸಿದ್ದ ಚೆರ್ನೋಬಿಲ್‌ ಪರಮಾಣು ವಿದ್ಯುತ್‌ ಸ್ಥಾವರದ ದುರಂತದ ದುಷ್ಪರಿಣಾಮ ಇನ್ನೂ ಜೀವಂತವಿದ್ದಾಗಲೇ ಸ್ಥಾವರ ಇರುವ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡಿರುವುದು ಅಪಾಯಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

1986ರ ಏ. 26ರಂದು ಸ್ಥಾವರದ ನಾಲ್ಕನೇ ವಿದ್ಯುದಾಗಾರ ಸ್ಫೋಟಗೊಂಡ ಪರಿಣಾಮ, ಪರಮಾಣು ವಿಕಿರಣ ಆ ಸುತ್ತಲಿನ ಪ್ರದೇಶಗಳಲ್ಲೆಲ್ಲಾ ಹರಡಿತ್ತು. ನಾಲ್ಕನೇ ಸ್ಥಾವರದ ಸುತ್ತ ವಿಕಿರಣ ತಡೆಯುವ ಗುಮ್ಮಟ ನಿರ್ಮಿಸಿದ ನಂತರ ಅಲ್ಲಿದ್ದ ಉಳಿದ ಮೂರು ವಿದ್ಯುದಾಗಾರಗಳಲ್ಲಿ ವಿದ್ಯುತ್‌ ಉತ್ಪಾದನೆ ಮುಂದುವರಿದಿತ್ತು.

ಆದರೆ, 2000ನೇ ಇಸವಿಯಲ್ಲಿ ಅವನ್ನೂ ನಿಲ್ಲಿಸಲಾಯಿತು. ಮೊನ್ನೆ ಶನಿವಾರ (ಏ. 4) ಸ್ಥಾವರದ ಸುತ್ತಲೂ ಇರುವ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಿಂದ ವಿಕಿರಣ ಸೂಸುವಿಕೆ ಸಾಮಾನ್ಯಕ್ಕಿಂತಲೂ 16 ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಉಕ್ರೇನ್‌ ಸರಕಾರ ಬೆಂಕಿ ನಂದಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಸೋಮವಾರದಿಂದ ಬೆಂಕಿಯು ನಿಯಂತ್ರಣಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next