Advertisement

Sullia ಮಂಡೆಕೋಲು ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ, ಹಾನಿ

11:31 PM Nov 06, 2023 | Team Udayavani |

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿ ದಿದ್ದು ತಡ ರಾತ್ರಿ ಬೇಂಗತ್ತಮಲೆಯ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಬೆಳೆಗಳನ್ನು ನಾಶಪಡಿಸಿವೆ.

Advertisement

ಬೊಳುಗಲ್ಲು, ಬೇಂಗತ್ತ ಮಲೆಯ ಶ್ರೀಹರಿ ನಾಯಕ್‌ ಅವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು 75ಕ್ಕೂ ಹೆಚ್ಚು ಅಡಿಕೆ, ತೆಂಗು ಹಾಗೂ ಬಾಳೆಗಿಡಗಳನ್ನು ಪುಡಿಗೈದಿವೆ. ಕೃಷಿ ತೋಟಕ್ಕೆ ಆನೆಗಳ ಪ್ರವೇಶ ತಡೆಯಲು ಮಂಡೆಕೋಲು, ಆಲೆಟ್ಟಿ ಮುಂತಾದೆಡೆ ಅರಣ್ಯ ಇಲಾಖೆಯ ವತಿಯಿಂದ ಕಂದಕಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆಯ ಕೊರತೆಯ ಕಾರಣ ಕಂದಕಗಳ ತುಂಬೆಲ್ಲ ಮಣ್ಣು ತುಂಬಿ ಇದೀಗ ಕಂದಕಗಳನ್ನು ದಾಟಿ ಆನೆಗಳು ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿವೆ.

ಆನೆಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದು ಶೀಘ್ರ ಆನೆಗಳ ತೆರವು ಕಾರ್ಯಾಚರಣೆಗೆ ಮುಂದಾಗಲು ಆಗ್ರಹಿಸಿದ್ದಾರೆ.

ಮಿತ್ತಬಾಗಿಲು: ಕಾಡಾನೆ ಹಾವಳಿ
ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕೂಡಬೆಟ್ಟು ಬಿ. ಕೆ. ರಾಮಕೃಷ್ಣ ರಾವ್‌ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು 40ಕ್ಕಿಂತ ಅಧಿಕ ಅಡಿಕೆ ಮರ, 5 ತೆಂಗಿನ ಮರ ಹಾಗೂ ಇತರ ಎರಡು ಮರಗಳನ್ನು ಮುರಿದು ಹಾಕಿವೆ.

ಕಾಡಾನೆಗಳು ತೋಟಕ್ಕೆ ಅಳವಡಿಸಿರುವ ಸೋಲಾರ್‌ ಬೇಲಿಯನ್ನು ತುಳಿದು ಹಾನಿ ಮಾಡಿ ಒಳ ನುಗ್ಗಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಧರ್ಮಸ್ಥಳದ ನೇರ್ತನೆ ಪರಿಸರದಲ್ಲೂ ಕಾಡಾನೆಗಳು ಇರುವ ಕುರಿತು ತಿಳಿದು ಬಂದಿದೆ.ಇಲ್ಲಿನ ಗುಡ್ಡ ಪ್ರದೇಶದಿಂದ ಆನೆಗಳು ಸಂಚರಿಸುವ ಸದ್ದು ಕಳೆದ ಎರಡು ದಿನಗಳಿಂದ ಕೇಳಿ ಬರುತ್ತಿರುವ ಕುರಿತು ಸ್ಥಳಿಯರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next