Advertisement

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

02:05 AM Sep 20, 2024 | Team Udayavani |

ಸುಳ್ಯ: ಮಹಿಳೆಯೋರ್ವರು ಚಲಾಯಿಸಿಕೊಂಡು ಬರುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗಿಳಿದು ಪಲ್ಟಿಯಾದ ಘಟನೆ ಸುಳ್ಯ ಸಮೀಪದ ಆಲೆಟ್ಟಿ ರಸ್ತೆಯ ನಾಗಪಟ್ಟಣದ ವಿಶ್ರಾಂತಿ ಗೃಹದ ಬಳಿ ಸಂಭವಿಸಿದೆ.

Advertisement

ಕಾರು ಚಾಲಕಿ ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಚರಂಡಿಗಿಳಿದ ಕಾರು
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಕಾಸರಗೋಡು – ಜಾಲ್ಸೂರು ಅಂತಾರಾಜ್ಯ ರಸ್ತೆಯ ಮುರೂರು ಸಮೀಪ ಗುರುವಾರ ಸಂಭವಿಸಿದೆ.

ಕಾರು ಜಾಲ್ಸೂರು ಕಡೆಯಿಂದ ಕಾಸರಗೋಡು ಹೋಗುತ್ತಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಅಲ್ಪ ಹಾನಿಯಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next