Advertisement

Hebri: ರಸ್ತೆಗೆ ಮರ ಎಳೆದು ಹಾಕಿದ ಕಾಡಾನೆ  

10:52 PM Sep 14, 2024 | Team Udayavani |

ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯದ ಪರಿಸರದ ನೆಲ್ಲಿಕಟ್ಟೆ ದೇವಸ್ಥಾನ ಬೆಟ್ಟು ಶೇಡಿಕಂತ್‌  ಪರಿಸರದಲ್ಲಿ ಮತ್ತೆ ಕಾಡಾನೆ ಹಾವಳಿ ಹೆಚ್ಚಾಗಿದೆ.

Advertisement

ನೆಲ್ಲಿಕಟ್ಟೆಯಿಂದ ಮೇಗದ್ದೆಗೆ ಹೋಗುವ ರಸ್ತೆಯ ದೇವಸ್ಥಾನ ಬೆಟ್ಟು ಶೇಡಿಕಂತ ರಸ್ತೆ ಬದಿಯಿದ್ದ ಬೈನೆ ಮರವನ್ನು ಕಾಡಾನೆ ರಸ್ತೆಗೆ ದೂಡಿ ಹಾಕಿದ್ದು, ಬೆಳಗ್ಗಿನ  ಹೊತ್ತು  ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ನಾಡ್ಪಾಲು ಗ್ರಾಮ ಪಂಚಾಯತ್‌ ಅಧ್ಯಕ್ಷ ನವೀನ್‌ ಹಾಗೂ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ  ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 ಭಯಭೀತ ಜನರು:

ಹೆಬ್ರಿಯಿಂದ ನೆಲ್ಲಿಕಟ್ಟೆ ತನಕ ಮಾತ್ರ ಬಸ್ಸಿನ ವ್ಯವಸ್ಥೆ ಇದ್ದು, ಅಲ್ಲಿಂದ ಮೇಗದ್ದೆ ತನಕ ಸುಮಾರು 5 ಕಿ. ಮೀ.  ನಡೆದುಕೊಂಡೇ ಬರಬೇಕು. ಶಾಲಾ ಮಕ್ಕಳಿಗಾಗಿ  ಅರಣ್ಯ ಇಲಾಖೆಯ  ವಲಯ ವನ್ಯಜೀವಿ ವಿಭಾಗ  ವಾಹನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಇತರರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

 ಭಯಬೇಡ :

Advertisement

ಅರಣ್ಯ ಪರಿಸರದಲ್ಲಿ ಆನೆ ಓಡಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ಜಮೀನನ್ನು ಹಾನಿ ಮಾಡಿದ ಘಟನೆ ನಡೆದಿಲ್ಲ. ಇಲಾಖೆ ಆನೆಯ ಚಲನವಲನನ್ನು ಗಮನಿಸುತ್ತಿದೆ. ಸಮಸ್ಯೆ ಉಲ್ಬಣಗೊಂಡಲ್ಲಿ ಕ್ರಮ ಕೈಗೊಳ್ಳುವುದಾಗಿ  ವನ್ಯಜೀವಿ ಭಾಗದ ಅರಣ್ಯ ಅಧಿಕಾರಿ ಚಿದಾನಂದಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.