Advertisement
50ಕ್ಕೂ ಅಧಿಕ ವಿದೇಶಿಗರು: ಕಂಬಳದಲ್ಲಿ 50ಕ್ಕೂ ಅಧಿಕ ವಿದೇಶಿ ಪ್ರಜೆಗಳು ಶನಿವಾರ ಮುಂಜಾನೆ ವೇಳೆ ಕಾಣ ಸಿಕ್ಕಿದ್ದರು. ಅವರಲ್ಲಿ ಶೇ.90ರಷ್ಟು ಜನರ ಕೈಯಲ್ಲಿ ಪ್ರೋಫೇಶನಲ್ ಕ್ಯಾಮೆರಾದ ಮೂಲಕ ಫೋಟೋಗಳನ್ನು ತೆಗೆಯುತ್ತಿರುವ ದೃಶ್ಯಗಳು ಕಂಡು ಬಂತು. ಇವರಲ್ಲಿ ಅನೇಕರು ಕಳೆದ ಬಾರಿ ನಡೆದ ಕರಾವಳಿಯಲ್ಲಿ ಆಯೋಜಿಸಿದ್ದ ಕಂಬಳದಲ್ಲಿ ಪಾಲ್ಗೊಂಡವರೇ, ಬೆಂಗ ಳೂರು ಕಂಬಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನೂ ಕೆಲವರು ಬೆಂಗಳೂರು ಪ್ರವಾಸದಲ್ಲಿರುವವರು ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿ ನೋಡಿಕೊಂಡು ಕಂಬಳಕ್ಕೆ ಬಂದಿದ್ದಾರೆ.
Related Articles
Advertisement
ಕಂಬಳ ಬೆಂಗಳೂರಿನಲ್ಲಿ ಆಯೋಜಿಸಿ ರುವುದು ಅಂತಾರಾಷ್ಟ್ರೀಯ ಫೋಟೋ ಗ್ರಾಫರ್‌ಗೆ ಅನುಕೂಲವಾಗಿದೆ. ಕ್ರೀಡಾಕೂಟ ದಲ್ಲಿ ತೆಗೆಯುವ ಫೋಟೋಗಳು ಸುಂದರ ವಾಗಿ ಮೂಡಿ ಬರುತ್ತದೆ. ನಮ್ಮ ಅಸೋಸಿಯೇ ಷನ್‌ನ ಅನೇಕರು ಈಗಾಗಲೇ ತೆಗೆದಿರುವ ಫೋಟೋಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗಳಿಸಿದ್ದು ಇದೆ. – ರಾವನ್ ಹಾಗೂ ಮಾರ್ಗೋ, ಫೋಟೋಗ್ರಾಫರ್, ಇಂಗ್ಲೆಂಡ್
ಬೆಂಗಳೂರು ಕಂಬಳ ಮೂಲಕ ದೊಡ್ಡ ಸಾಧನೆ ಮಾಡಿದ್ದೇವೆ. ಕೋಣದ ಎಲ್ಲ ಯಜಮಾನರು ಕೋಣಗಳನ್ನು ಕರೆದುಕೊಂಡು ಬಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಂಗಳೂರು ಕಂಬಳ ಯಶಸ್ವಿಯಾಗಿದೆ. – ಪ್ರಕಾಶ್ ಶೆಟ್ಟಿ, ಬೆಂಗಳೂರು ಕಂಬಳ ಸಮಿತಿ ಗೌರವ ಅಧ್ಯಕ್ಷ.
ಕಂಬಳಕ್ಕೆ ಮಳೆ ಸಾಥ್, ಶುಭ ಸಂಕೇತ!: ಕರಾವಳಿಯಲ್ಲಿ ಸಾಂಪ್ರದಾಯಿಕ ಕಂಬಳಗಳನ್ನು ಆಯೋಜಿಸುವಾಗ ಮಳೆ ಬರುವುದು ಸಹಜ. ದೇವರ ಕೃಪೆಯಿಂದ ಮಳೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಶನಿವಾರ ಮಧ್ಯಾಹ್ನದಿಂದಲೇ ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಮಳೆಯಾಗಿತ್ತು. ಇಂದು ಸರಿದ ಮಳೆ ಕಾಕತಾಳಿಯವೋ ಅಥವಾ ಬೆಂಗಳೂರು ಕಂಬಳದ ಶುಭ ಮುನ್ಸೂಚನೆ ಸಂಕೇತವೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿತ್ತು.