Advertisement
ಸ್ವತಂತ್ರ ಭಾರತದ ಆರಂಭಿಕ ಘಟ್ಟದಲ್ಲಿ ಭಾರತದ ವಿದೇಶಾಂಗ ನೀತಿಗೆ ಒಂದು ದೃಢತೆ ಇತ್ತು. ಅದು ಬಂದದ್ದು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರಿಂದಾಗಿ. ಆಗ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡುವಿನ ಶೀತಲ ಸಮರದ ಕಾರಣದಿಂದಾಗಿ ನಾವು ಯಾರೊಬ್ಬರ ಪರ ನಿಲ್ಲಲು ಸಾಧ್ಯ ವಿಲ್ಲದಂಥ ಸ್ಥಿತಿ ಇತ್ತು. ಹೀಗಾಗಿ ಆಗ ಜವಾಹರ್ ಲಾಲ್ ನೆಹರೂ ಅವರು ಅಲಿಪ್ತ ನೀತಿಯ ಮೊರೆ ಹೋದರು. ಇಡೀ ಜಗತ್ತಿನ ನೀವು ಹೇಗೆ ಬೇಕಾದರೂ ಹೊಡೆದಾಡಿಕೊಳ್ಳಿ, ಆದರೆ ನಮ್ಮನ್ನು ಮಾತ್ರ ನಿಮ್ಮ ಮಧ್ಯೆ ಕರೆಯಬೇಡಿ. ಹಾಗೆಯೇ ಯುದ್ಧ ಎಂಬುದು ಯಾರಿಗೂ ಒಳ್ಳೆಯದಲ್ಲ ಎಂಬ ಸಂದೇಶವನ್ನೂ ಆಗ ರವಾನಿ ಸಲಾಗಿತ್ತು. ಭಾರತದ ಈ ನಿಲುವನ್ನು ಇಡೀ ಜಗತ್ತೇ ಸ್ವಾಗತಿಸಿತ್ತು.
ಪ್ರಸ್ತುತ ಕಾಲಘಟ್ಟಕ್ಕೆ ಬಂದರೆ, ಭಾರತದ ವಿದೇಶಾಂಗ ನೀತಿ ಹೆಚ್ಚು ಗಟ್ಟಿಯಾಗಿದೆ. ಯಾರೊಬ್ಬರ ಮಾತು ಕೇಳದಂಥ ಪರಿಸ್ಥಿತಿಗೂ ನಾವು ಬಂದಿದ್ದೇವೆ. ಇದಕ್ಕೆ ಪ್ರಮುಖ ಕಾರಣ, ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯವರು ಹಾಕಿಕೊಟ್ಟ ಇಮೇಜ್ ಮತ್ತು ಈ ಇಮೇಜ್ ಅನ್ನು ಅತ್ಯುತ್ತಮವಾಗಿ ಬೆಳೆಸುತ್ತಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್. ಇಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಬಗ್ಗೆ ಜಾಗತಿಕವಾಗಿ ಒಳ್ಳೆಯ ಮಾತುಗಳಿವೆ. ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಮೇಲೆ ಎನ್‌ಡಿಎ ಸರಕಾರದ ಎರಡನೇ ಅವಧಿಯಲ್ಲಿ ಜೈಶಂಕರ್ ವಿದೇಶಾಂಗ ಸಚಿವರಾದರು. ಅದಕ್ಕೂ ಮುನ್ನ ಸುಷ್ಮಾ ಸ್ವರಾಜ್ ಅವರ ಇಲಾಖೆಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಡಾ| ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆಯೂ ವಿದೇಶಾಂಗ ಕಾರ್ಯ ದರ್ಶಿ ಯಾಗಿದ್ದ ಜೈಶಂಕರ್ ಅವರು, ಭಾರತ-ಅಮೆರಿಕದ ಅಣ್ವಸ್ತ್ರ ನೀತಿ ಸಹಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Related Articles
Advertisement
ಕೊರೊನಾ ಅನಂತರದಲ್ಲಿ ಎದುರಾದ ಮತ್ತೂಂದು ಸಮಸ್ಯೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ. ರಷ್ಯಾ ಎಂದಿಗೂ ಭಾರತದ ಪರಮಾಪ್ತ ದೇಶ. ಹಾಗೆಯೇ ಉಕ್ರೇನ್ ಜತೆಗಿನ ಭಾರತದ ಸಂಬಂಧ ಉತ್ತಮವಾಗಿಯೇ ಇದೆ. ಈ ಯುದ್ಧದ ವೇಳೆ ಇಡೀ ಪಾಶ್ಚಾತ್ಯ ದೇಶಗಳು ಉಕ್ರೇನ್ ಪರವಾಗಿ ನಿಂತರೆ, ಭಾರತ ತಟಸ್ಥ ಧೋರಣೆ ಅನುಸರಿಸಿತು. ಈ ಹಂತದಲ್ಲಿ ಭಾರತ ಮನುಕುಲಕ್ಕೆ ಯುದ್ಧ ಒಳ್ಳೆಯದಲ್ಲ ಎಂದಷ್ಟೇ ಹೇಳಿತು. ಹಾಗೆಯೇ ಇಡೀ ಜಗತ್ತು ರಷ್ಯಾ ಜತೆಗಿನ ವ್ಯವಹಾರ ಸಂಬಂಧ ಕಡಿದುಕೊಂಡರೆ ಭಾರತ ಜಾಣ್ಮೆಯ ನಡೆ ಇಟ್ಟಿತು. ರಷ್ಯಾ ಜತೆಗಿನ ಸಂಬಂಧವನ್ನು ಮತ್ತಷ್ಟು ಸುಧಾರಿಸಿಕೊಂಡು ತೈಲವನ್ನು ಹೆಚ್ಚಾಗಿಯೇ ಆಮದು ಮಾಡಿಕೊಂಡಿತು. ಇದು ಭಾರತದ ಆರ್ಥಿಕತೆಗೆ ದೊಡ್ಡ ಸಹಾಯವೇ ಆಯಿತು. ಅಲ್ಲದೆ ಉಕ್ರೇನ್‌ನಲ್ಲಿ ಇದ್ದ ಭಾರತದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳು ವಲ್ಲಿಯೂ ಜೈಶಂಕರ್ ಅವರ ಪಾತ್ರ ಗಣನೀಯವಾಯಿತು.
ರಷ್ಯಾ-ಉಕ್ರೇನ್ ಯುದ್ಧದ ವೇಳೆ ಪಾಶ್ಚಾತ್ಯ ದೇಶಗಳು ಭಾರ ತದ ನಡೆ ಖಂಡಿಸಿದಾಗ, ಜೈಶಂಕರ್ ಅವರು ಯೂರೋಪ್‌ನ ನೋವು ಇಡೀ ಜಗತ್ತಿನ ನೋವು ಆಗಬೇಕಾಗಿಲ್ಲ. ನಮ್ಮ ವಿದೇಶಾಂಗ ನೀತಿಗೂ ನೀವು ಬೆಲೆ ನೀಡಲೇಬೇಕು ಎಂದು ಹೇಳಿ ಆ ದೇಶಗಳ ಬಾಯಿ ಮುಚ್ಚಿಸಿದರು. ಹಾಗೆಯೇ ಈ ವರ್ಷ ಭಾರತದಲ್ಲಿ ಜಿ20 ಸಮ್ಮೇಳನ ನಡೆಸಿದ್ದು ಹೆಗ್ಗಳಿಕೆ. ಇದರಲ್ಲಿ ಜೈಶಂಕರ್ ಅವರ ಪಾತ್ರ ದೊಡ್ಡದಿದೆ. ಅಲ್ಲದೆ ಈ ಜಿ20ಗೆ ದಕ್ಷಿಣ ಆಫ್ರಿಕಾ ಯೂನಿಯನ್ ಸೇರಿಸಿದ್ದು ಭಾರತದ ಮತ್ತೂಂದು ಸಾಧನೆ. ಈ ಬಗ್ಗೆ ಜೈಶಂಕರ್ ಅವರನ್ನು ಶ್ಲಾ ಸಲೇಬೇಕು.ಅತ್ತ ಬ್ರಿಕ್ಸ್‌ಗೆ ಪಾಕಿಸ್ಥಾನವನ್ನು ಸೇರಿಸಬೇಕು ಎಂಬುದು ಚೀನದ ಒತ್ತಾಸೆ. ಆದರೆ ಇದಕ್ಕೆ ಭಾರತ ಒಪ್ಪಿಗೆ ನೀಡಿಲ್ಲ. ಆದರೆ ಅರ್ಜೆಂಟೀನಾ, ಇಥಿಯೋಪಿಯಾ, ಇರಾನ್, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಬ್ರಿಕ್ಸ್‌ನೊಳಗೆ ಕಾಲಿಟ್ಟಿವೆ. ಈ ಬೆಳವಣಿಗೆ ಹಿಂದೆಯೂ ಜೈಶಂಕರ್ ಅವರ ಪ್ರಭಾವವಿದೆ. ಇತ್ತೀಚಿನ ಇಸ್ರೇಲ್ ಮತ್ತು ಹಮಾಸ್ ಉಗ್ರರ ವಿಚಾರದಲ್ಲಿ ಭಾರತ ಗಟ್ಟಿ ನಿಲುವು ತೆಗೆದುಕೊಂಡಿದೆ. ಹಮಾಸ್ ಉಗ್ರರು ಅ.7ರಂದು ಇಸ್ರೇಲ್‌ನೊಳಗೆ ನುಗ್ಗಿ ಭಯೋತ್ಪಾದಕ ಕೃತ್ಯ ಎಸಗಿದ ತತ್‌ಕ್ಷಣ, ಇದನ್ನು ಖಂಡಿಸಿ ಇಸ್ರೇಲ್ ಪರವಾಗಿ ಪ್ರಬಲವಾಗಿ ನಿಂತಿತು. ಬಳಿಕ ಗಾಜಾಪಟ್ಟಿಯಲ್ಲಿ ಇಸ್ರೇಲ್ ದಾಳಿಯಿಂದಾಗಿ ಜನ ಸಾಯುವಾಗಲೂ ಆತಂಕ ವ್ಯಕ್ತಪಡಿಸಿ, ಪ್ಯಾಲೆಸ್ತೀನ್‌ಗೆ ನೆರವು ಕಳುಹಿಸಿದೆ. ಅಲ್ಲದೆ ಇಸ್ರೇಲ್‌ನಲ್ಲಿದ್ದ ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದೆ. ಈ ಎಲ್ಲ ಸಂಗತಿಗಳನ್ನು ಗಮನಿಸುವುದಾದರೆ, ಭಾರತದ ವಿದೇಶಾಂಗ ನೀತಿ ಪ್ರಬಲವಾಗಿದೆ. ಕೆನಡಾ ಬೆಳವಣಿಗೆ ಯಲ್ಲಂ ತೂ ಭಾರತ ನಿಮ್ಮ ಮಾತುಗಳನ್ನು ನಾವು ಕೇಳುವುದಿಲ್ಲ ಎಂಬ ದೃಢ ಧೋರಣೆ ತಾಳಿದೆ. ಅಲ್ಲದೆ ಸಿಕ್ಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ವಿಚಾರದಲ್ಲಿ ಕೆನಡಾ ಭಾರತದ ಮೇಲೆ ಗೂಬೆ ಕೂರಿಸಿ ದಾಗ, ಆ ದೇಶಕ್ಕೆ ಗಟ್ಟಿ ಮಾತುಗಳಿಂದಲೇ ತಿರುಗೇಟು ನೀಡಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಯಾರೊಬ್ಬರ ಪ್ರಭಾವಕ್ಕೂ ಮಣೆ ಹಾಕುತ್ತಿಲ್ಲ. ಅಮೆರಿಕವೋ ಅಥವಾ ರಷ್ಯಾವೋ ತನ್ನ ಮೇಲೆ ಎಂಥದ್ದೇ ಪ್ರಭಾವ ಬೀರಿದರೂ, ಅದಕ್ಕೂ ಮಣೆ ಹಾಕುತ್ತಿಲ್ಲ. ಬದಲಾಗಿ ಸ್ವತಂತ್ರ ವಿದೇಶಾಂಗ ನೀತಿ ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ಈ ಹಿಂದೆ ಪಾಕಿಸ್ಥಾನ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್, ಜೈಶಂಕರ್ ಅವರ ವಿದೇಶಾಂಗ ನೀತಿ ಬಗ್ಗೆ ತಮ್ಮ ಪಕ್ಷದ ಬಹಿರಂಗ ಸಮಾವೇಶದಲ್ಲೇ ಕೊಂಡಾಡಿದ್ದನ್ನೂ ಗಮನಿ ಸಬಹುದು. ಹಿಂದೆ ಚೀನ ಅಥವಾ ಪಾಕಿಸ್ಥಾನದ ಜತೆ ನಾವು ಈಗ ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳಲೂ ಹಿಂಜರಿಯುವಂಥ ಸ್ಥಿತಿ ಇತ್ತು. ಆದರೀಗ ನಾವು ಈ ದೇಶಗಳ ಜತೆ ಮಾತನಾಡುವುದಿಲ್ಲ ಎಂಬುದನ್ನು ಗಟ್ಟಿಯಾಗಿಯೇ ಹೇಳುತ್ತಿದ್ದೇವೆ.
ಇನ್ನು ಮಧ್ಯಪ್ರಾಚ್ಯ ದೇಶಗಳಾದ ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಒಮಾನ್, ಇರಾನ್ ಸೇರಿದಂತೆ ಈ ದೇಶ ಗಳ ಜತೆಗಿನ ಸಂಬಂಧ ಉತ್ತಮವಾಗಿಯೇ ಇದೆ. ಅತ್ತ ಆಫ್ರಿಕಾ ದೇಶಗಳ ಪಾಲಿಗೆ ಭಾರತ ಆಪತಾºಂಧವನಂತೆ ಆಗಿದೆ. ಈ ದೇಶಗಳು ತಮ್ಮ ಸಮಸ್ಯೆಗೆ ಈಗ ಅಮೆರಿಕವನ್ನು ನೋಡ ಬೇಕಾಗಿಲ್ಲ. ಭಾರತವನ್ನು ನೋಡಿದರೆ ಸಾಕು ಎಂಬಂತ ಪರಿಸ್ಥಿತಿ ಉದ್ಭವ ವಾಗಿದೆ. ವಿದೇಶಾಂಗ ಕಾರ್ಯದರ್ಶಿಯಾಗಿ ವಿದೇ ಶಾಂಗ ವ್ಯವ ಹಾರವನ್ನು ಅರ್ಥ ಮಾಡಿಕೊಂಡಿದ್ದರಿಂದಲೇ ಸಂಬಂಧ ಸುಧಾರಣೆಗೊಂಡಿವೆ ಎಂಬುದನ್ನು ತಜ್ಞರೇ ಹೇಳುತ್ತಿದ್ದಾರೆ. ಸೋಮಶೇಖರ ಸಿ.ಜೆ.