Advertisement

ಪರಭಾಷೆ ಮತದಾರನದ್ದೇ ಪಾರಮ್ಯ

12:15 PM Mar 25, 2019 | Lakshmi GovindaRaju |

ಕ್ಷೇತ್ರದ ವಸ್ತುಸ್ಥಿತಿ: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಚುನಾವಣೆ ನಡೆದರೂ ಹೆಚ್ಚು ಜನ ಕಾಂಗ್ರೆಸನ್ನೇ ಬೆಂಬಲಿಸುತ್ತಾರೆ ಎಂದು ಹಿಂದಿನ ಚುನಾವಣೆಗಳ ಅಂಕಿ ಅಂಶ ಹೇಳುತ್ತವೆ. ಪ್ರಮುಖವಾಗಿ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿಯೂ (2008, 2013, 2018) ಶಾಸಕ ಕೆ.ಕೆ.ಜಾರ್ಜ್‌ ಜಯಗಳಿಸಿದ್ದಾರೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1,58,708(ಶೇ.52) ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ 80,891 (ಶೇ.51.3) ಮತ, ಬಿಜೆಪಿಯ ಪಿ.ಸಿ.ಮೋಹನ್‌ ಪರ 63,941 (ಶೇ.40.6) ಮತಗಳು ಚಲಾವಣೆಯಾಗಿವೆ.

ಉಳಿದಂತೆ ಬಿಬಿಎಂಪಿ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 8 ಬಿಬಿಎಂಪಿ ವಾರ್ಡ್‌ಗಳಿದ್ದು, 5ರಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ಗಳು, 3ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. 2014ರ ಲೊಕಸಭೆ ಚುನಾವಣೆ ವೇಳೆಯೂ ಕ್ಷೇತ್ರದ ವಾರ್ಡ್‌ಗಳಲ್ಲಿ ಇದೇ ಪರಿಸ್ಥಿತಿ ಇತ್ತು.

ಸರ್ವಜ್ಞನಗರ ಕ್ಷೇತ್ರದಲ್ಲಿ ಕನ್ನಡಿಗರಗಿಂತ ತಮಿಳು, ಉರ್ದು ಭಾಷಿಕರೇ ಬಹುಸಂಖ್ಯಾತರು. ಜತೆಗೆ ಮುಸ್ಲಿಂ ಹಾಗೂ ತಮಿಳು ಸಮುದಾಯದವರೇ ಹೆಚ್ಚಾಗಿದ್ದಾರೆ. ಕಳೆದ ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಕ್ಷೇತ್ರ ಎಂಬ ಹಣೆಪಟ್ಟಿ ಹೊಂದಿದೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಕ್ಷೇತ್ರದ ವಿವಿಧೆಡೆ 18 ಶುದ್ಧ ಕುಡಿಯುವ ನೀರಿನ ಯೋಜನೆಗಳು
-15.6 ಲಕ್ಷ ಅನುದಾನದಲ್ಲಿ ಬಾನಸವಾಡಿಯ ಭುವನೇಶ್ವರಿ ಉದ್ಯಾನ ಅಭಿವೃದ್ಧಿ.
-47.18 ಲಕ್ಷ ಅನುದಾನದಲ್ಲಿ ಬಾನಸಕವಾಡಿ ವಾರ್ಡ್‌ನಲ್ಲಿ ಸಿಸಿಟಿವಿ ಅಳವಡಿಕೆ ಕಾಮಗಾರಿ ಚಾಲನೆ.

Advertisement

ನಿರೀಕ್ಷೆಗಳು
-ಕಿರಿದಾದ ರಸ್ತೆಗಳು, ವಾಹನದಟ್ಟಣೆ, ಕೊಳೆಚೆ ಪ್ರದೇಶಗಳ -ಮುಕ್ತಿಗೆ ಸ್ಮಾರ್ಟ್‌ಸಿಟಿಯಡಿ ಉತ್ತಮ ಯೋಜನೆ.

-ವಾರ್ಡ್‌ಗಳು- 8
-ಬಿಜೆಪಿ- 3
-ಕಾಂಗ್ರೆಸ್‌- 5

-ಜನಸಂಖ್ಯೆ- 5,34,217
-ಮತದಾರರ ಸಂಖ್ಯೆ- 3,41,806
-ಪುರುಷರು – 1,73,020
-ಮಹಿಳೆಯರು – 1,68,786

2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,58,708(ಶೇ.52)
-ಬಿಜೆಪಿ ಪಡೆದ ಮತಗಳು – 63,941 (ಶೇ.40.6)
-ಕಾಂಗ್ರೆಸ್‌ ಪಡೆದ ಮತಗಳು – 80,891 (ಶೇ.51.3)
-ಆಮ್‌ ಆದ್ಮಿ ಪಡೆದ ಮತಗಳು – 6,913 (ಶೇ.4.4)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಕೆ.ಜೆ.ಜಾರ್ಜ್‌ ಕಾಂಗ್ರೆಸ್‌ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 3
-ಕಾಂಗ್ರೆಸ್‌ ಸದಸ್ಯರು -5

ಮಾಹಿತಿ: ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next