Advertisement

ವಿದೇಶ ಉದ್ಯೋಗ ಭರವಸೆ ನೀಡಿ 35 ಲ.ರೂ.ವಂಚನೆ

12:40 AM Sep 15, 2019 | mahesh |

ಹೆಬ್ರಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಜಪೆಯ ಆಸೀಫ್‌ ಇಸ್ಮಾ ಯಿಲ್‌, ಆತನ ಪತ್ನಿ ಹಸೀನಾ ಫರ್ವಿನ್‌ ಹಾಗೂ ಇಸ್ಮಾಯಿಲ್‌ 35 ಲ. ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರಿನ ವಿವರ
ಆತ್ರಾಡಿಯ ಜುಬೇದಾ ಎಂಬವರ ಪುತ್ರ ಫರಾನ್‌ಗೆ ವಿದೇಶದಲ್ಲಿ ಕೆಲಸ ತೆಗೆಸಿಕೊಟ್ಟಿದ್ದು, ಇದಕ್ಕಾಗಿ ಜುಬೇದಾ ವೀಸಾಕ್ಕೆಂದು 5 ಲ. ರೂ. ಅನ್ನು ಆರೋಪಿಗಳಿಗೆ ನೀಡಿದ್ದಾರೆ. ಫರಾನ್‌ ಪ್ರಕರಣದ ಪ್ರಮುಖ ಆರೋಪಿ ಆಸೀಫ್‌ ಇಸ್ಮಾಯಿಲ್‌ನೊಂದಿಗೆ ಸೌದಿಯಲ್ಲಿ 10 ತಿಂಗಳು ಕೆಲಸ ಮಾಡಿದ್ದು, ಆಗ ಸಂಬಳ ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಆಸೀಫ್ ಹಾಗೂ ಆತನ ಪತ್ನಿ ಹಸೀನಾ ಪರ್ವಿನ್‌ನಲ್ಲಿ ವಿಚಾರಿಸಿದಾಗ, ಯಾವುದೇ ಹಣ ಬಾಕಿ ಇಲ್ಲ. ನೀವು ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಫ‌ರಾನ್‌ನ ಪಾಸ್‌ಪೋರ್ಟ್‌ ಆಸೀಫ್ನಲ್ಲಿದೆ. ಅಲ್ಲದೇ ಜುಬೇದಾ ದಂಪತಿ ವಿದೇಶದಲ್ಲಿದ್ದಾಗ ಅವರಲ್ಲಿ ಹಣ ಕ್ಕಾಗಿ ಪೀಡಿ ಸುತ್ತಿದ್ದರು. ಆಪಾದಿತ ದಂಪ ತಿ ಯು ಜುಬೇದಾಳ ಗಂಡ 30 ವರ್ಷ ವಿದೇಶದಲ್ಲಿ ದುಡಿದಿದ್ದ ಕಂಪೆನಿಯ ಸರ್ವಿಸ್‌ ಹಣವನ್ನು ನೀಡದೆ ವಂಚಿಸಿದ್ದು, ವಿಚಾರಿಸಿದಾಗ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದಿ ದ್ದಾರೆ. ಅಲ್ಲದೆ ಜುಬೇದಾರ ತಂಗಿ ಜೀನತ್‌ನ ಪುತ್ರ ಅರ್ಫಾನ್‌ಗೂ ಕೆಲಸ ಕೊಡಿಸುವುದಾಗಿ ಆರೋಪಿಗಳು 5 ಲ.ರೂ. ಪಡೆದು ಕೊಂಡಿದ್ದರು,

ಜುಬೇದಾ ಹೆಸರಿನಲ್ಲಿ ಲಕ್ಷಾಂತರ ರೂ. ಆಸ್ತಿಯಿದ್ದು,ಅದನ್ನು ಲಪಟಾ ಯಿಸುವ ಹುನ್ನಾರದಿಂದ ಆರೋಪಿಗಳು ದೂರ ವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದು, ಮತ್ತೂ 30 ಲ. ರೂ. ಪಡೆದು ವಂಚಿಸಿದ್ದಾರೆ ಎಂದು ಜುಬೇದಾ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳಿಗಾಗಿ ಪೊಲೀಸರು ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next