Advertisement

ವಿದೇಶಿ ದೇಣಿಗೆ: 1 ಸಾವಿರ ಎನ್‌ಜಿಓಗಳಿಗೆ ನೋಟಿಸ್‌

07:40 AM Sep 14, 2017 | |

ನವದೆಹಲಿ: ವಿದೇಶಿ ದೇಣಿಗೆ ಪಡೆಯುವ ಎನ್‌ಜಿಒಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಗೃಹ ಸಚಿವಾಲಯ, ಹಾಲಿ ಜಾರಿಯಲ್ಲಿರುವ ಕಠಿಣ ಕಾನೂನು ಉಲ್ಲಂ ಸಿ ವಿದೇಶದಿಂದ ಹಣ ಪಡೆದ ದೇಶದ 1222 ಎನ್‌ಜಿಒಗಳಿಗೆ ನೋಟಿಸ್‌ ನೀಡಿದೆ. ಈ ಪೈಕಿ ರಾಮಕೃಷ್ಣ  ಮಠ, ರಾಮಕೃಷ್ಣ ಮಿಷನ್‌, ಇಂದೋರ್‌ ಕ್ಯಾನ್ಸರ್‌ ಫೌಂಡೇಷನ್‌ ಚಾರಿಟೆಬಲ್‌ ಟ್ರಸ್ಟ್‌, ಮದನಿ ದಾರುತ್‌ ತರ್ಬೀಯತ್‌ ಮತ್ತು ಕೊಯಮತೂರ್‌ ಕ್ರಿಶ್ಚಿಯನ್‌ ಚಾರಿಟೆಬಲ್‌ ಟ್ರಸ್ಟ್‌ ಸೇರಿ ಹಲವು ಪ್ರಮುಖ ಎನ್‌ಜಿಒಗಳಿಗೆ ನೋಟಿಸ್‌ ನೀಡಿರುವುದಾಗಿ ತಿಳಿದುಬಂದಿದೆ.

Advertisement

ವಿದೇಶಿ ದೇಣಿಗೆ ಪಡೆಯುವ ಕುರಿತು ಇರುವ ನಿಯಮ ಮತ್ತು ಕಾನೂನುಗಳನ್ನು ಉಲ್ಲಂ ಸದಂತೆ ಈ ಹಿಂದೆ ದೇಶದ ಎನ್‌ಜಿಒಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಆದರೆ ಎನ್‌ಜಿಒಗಳು ಎಚ್ಚೆತ್ತುಕೊಳ್ಳದ ಕಾರಣ ನೋಟಿಸ್‌ ರವಾನಿಸಿ ದ್ದು, ನೋಟಿಸ್‌ ಪಡೆದ ಎನ್‌ಜಿಒಗಳಿಗೆ ಈಗ ವಿದೇಶಿ ದೇಣಿಗೆ ಪಡೆಯುವ ಅನುಮತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ವಿದೇಶಿ ದೇಣಿಗೆ ಜಮಾ ಆಗುವ ತಮ್ಮ ಬ್ಯಾಂಕ್‌ ಖಾತೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸುವಂತೆ ಸಚಿವಾಲಯ ನೋಟಿಸ್‌ ಮೂಲಕ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next