Advertisement
ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ರಚನೆಯ ಬಳಿಕ ರಾಜಕೀಯವಾಗಿಯೂ ಹೊಸ ಲೆಕ್ಕಾಚಾರ ಗರಿಗೆದರಿವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆನೇರ ಹಣಾಹಣಿ ಇರುತ್ತಿದ್ದ ಕಡೆಗಳಲ್ಲಿ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ಕಂಡು ಬಂದಿದೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿದ್ದರೂ ತಾಲೂಕಿನ ವ್ಯಾಪ್ತಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಕ್ಷ ಪ್ರಾಬಲ್ಯದಲ್ಲಿ ಏರಪೇರು ಕಾಣಿಸುತ್ತಿತ್ತು. ಇದೀಗ ತಿಡಿಗೋಳ ಜಿಪಂ ಹೊರತುಪಡಿಸಿ, ಉಳಿದ 6 ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಹಳ್ಳಿಗಳೇ ಉಳಿದುಕೊಳ್ಳಲಿವೆ. ಸಹಜವಾಗಿಯೇ ಇದು ಮಸ್ಕಿ ಛಾಯೆ ಸ್ಥಳೀಯ ಕ್ಷೇತ್ರಗಳ ಮೇಲೆ ಇಲ್ಲವಾಗಲಿದೆ.
ದೇವರಗುಡಿ ಸೇರಿಸಿಕೊಳ್ಳಲಾಗಿದೆ. ಜವಳಗೇರಾ ಗ್ರಾಪಂನ ವ್ಯಾಪ್ತಿಗೆ ಎಲೆಕೂಡ್ಲಿಗಿ, ಪಗಡದಿನ್ನಿ, ಬೂತಲದಿನ್ನಿ ಪಂಚಾಯಿತಿಗಳನ್ನು ಸೇರಿಸಲಾಗಿದೆ. ರಾಗಲಪರ್ವಿಯಲ್ಲಿದ್ದ ವಳಬಳ್ಳಾರಿ ಗ್ರಾಪಂ ಅನ್ನು ಬಾದರ್ಲಿ ಜಿಪಂ ಕ್ಷೇತ್ರಕ್ಕೆ ಸೇರಿಸಿ, ಅಲ್ಲಿಯೂ ಬದಲಾವಣೆ ತರಲಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷಗಳಿಗೆ ಪ್ಲಸ್-ಮೈನಸ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್‌ನವರ ಹಾದಿ ಸುಗಮ: ಗುಡುದೂರು ಜಿಪಂನಲ್ಲಿದ್ದ ಎಲೆಕೂಡ್ಲಿಗಿ, ಪಗಡದಿನ್ನಿ, ಜಾಲಿಹಾಳ ಜಿಪಂ ವ್ಯಾಪ್ತಿಯಲ್ಲಿದ್ದ ಗುಂಜಳ್ಳಿ, ವಿರೂಪಾಪುರ ಗ್ರಾಪಂಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸುವುದಕ್ಕೆ ಬಹುತೇಕ ಹಿನ್ನಡೆಯಾಗುತ್ತಿತ್ತು. ಅವು ಮಸ್ಕಿ ಕ್ಷೇತ್ರದ ರಾಜಕಾರಣದೊಂದಿಗೆ ನಂಟು ಬೆಸೆದುಕೊಂಡಿದ್ದವು. ಅಲ್ಲಿ ಬಹುತೇಕರು ಜೆಡಿಎಸ್‌ನಿಂದ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದರು. ಈಗ ಆ ಎಲ್ಲ ಪಂಚಾಯಿತಿಗಳನ್ನು ಅದಲು-ಬದಲು ಮಾಡಿರುವುದರಿಂದ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸುಗಮವಾದಂತಿದೆ.
Related Articles
ಇದರ ಪರಿಣಾಮವಾಗಿ 20 ತಾಪಂ ಕ್ಷೇತ್ರಗಳು ಉಳಿದಿರುವುದರಿಂದ ತಾಪಂ ಗದ್ದುಗೆ ಹಿಡಿಯುವ ವೇಳೆ ರಾಜಕೀಯ ಲೆಕ್ಕಾಚಾರ ಬದಲಿಸಬೇಕಾಗಲಿದೆ.
Advertisement
ತಾಪಂ ಅಧ್ಯಕ್ಷರ ಕ್ಷೇತ್ರವೇ ರದ್ದು!ಸದ್ಯ ಇಲ್ಲಿನ 30 ಸದಸ್ಯ ಬಲದ ತಾಪಂಗೆ ಸುಲ್ತಾನಪುರ ಕ್ಷೇತ್ರದ ಸದಸ್ಯೆ ಲಕ್ಷ್ಮಿದೇವಿ ಅಮರೇಶ ಗುರಿಕಾರ್ ಅವರು ಅಧ್ಯಕ್ಷರಾಗಿದ್ದಾರೆ. ಗೌಡನಬಾವಿ ಮಸ್ಕಿ ಕ್ಷೇತ್ರದಲ್ಲಿ ಪ್ರತ್ಯೇಕ ಜಿಪಂ ಆಗಿ ಉದಯಿಸುವ ಸಾಧ್ಯತೆಯಿದೆ. ಸುಲ್ತಾನಪುರ ಕ್ಷೇತ್ರ ಇಲ್ಲವಾಗಲಿದ್ದು, ಸುಲ್ತಾನಪುರ ಕ್ಷೇತ್ರದಿಂದ ಆಯ್ಕೆಯಾಗಿ ಸಿಂಧನೂರು ತಾಪಂಗೆ ಅಧ್ಯಕ್ಷರಾಗಿದ್ದ ಇತಿಹಾಸ ಇದೇ ಅವಧಿಗೆ ಕೊನೆಗೊಳ್ಳಲಿದೆ. ಕುನ್ನಟಗಿ ತಾಪಂ ರದ್ದಾಗಿ ಪಗಡದಿನ್ನಿ, ದೇವರಗುಡಿ ರದ್ದಾಗಿ ಬೂತಲದಿನ್ನಿ ಕ್ಷೇತ್ರವಾಗಲಿವೆ. ಕುರುಕುಂದಾ, ವಳಬಳ್ಳಾರಿ, ಚನ್ನಳ್ಳಿ, ಗುಂಜಳ್ಳಿ, ಕುರುಕುಂದಾ ತಾಪಂಗಳು ಕ್ಷೇತ್ರಗಳು ಸಂಪೂರ್ಣ ರದ್ದಾಗಲಿವೆ. 20 ತಾಪಂ ಕ್ಷೇತ್ರಗಳಿವು
ಪಗಡದಿನ್ನಿ, ಜವಳಗೇರಾ, ರಾಗಲಪರ್ವಿ, ಗೋನವಾರ, ಅಲಬನೂರು, ಬಾದರ್ಲಿ, ಸಿಂಧನೂರು ಗ್ರಾಮೀಣ, ದಢೇಸುಗೂರು, ಸೋಮಲಾಪುರ, ಸಾಲಗುಂದಾ,
ಮುಕ್ಕುಂದಾ, ರೌಡಕುಂದಾ, ಹೊಸಳ್ಳಿ (ಇಜೆ), ಗೋರೆಬಾಳ, ಜಾಲಿಹಾಳ, ಬೂತಲದಿನ್ನಿ, ಗಾಂಧಿನಗರ, ತಿಡಿಗೋಳ ತಾಪಂ ಕ್ಷೇತ್ರಗಳು ಉಳಿದಿದ್ದು, ಇಲ್ಲಿನ ತಾಪಂನ ಸದಸ್ಯ ಬಲ 30ರಿಂದ 20ಕ್ಕೆ ಕುಗ್ಗಿದೆ. ಅಂತಹ ನಷ್ಟವೇನಿಲ್ಲ. ಮೊದಲು ಮಸ್ಕಿ ತಾಲೂಕಿಗೆ ಬರುವ ಕ್ಷೇತ್ರವಾಗಿತ್ತು. ಸಂಪೂರ್ಣ ಪ್ರಮಾಣದಲ್ಲಿ ಕ್ಷೇತ್ರ ಪುನರ್ ರಚನೆಯಲ್ಲಿ ಸುಲ್ತಾನಪುರ ಕೈ ಬಿಟ್ಟಿರಬಹುದು. ಗೌಡನಬಾವಿ ಜಿಪಂ ಕ್ಷೇತ್ರವಾಗುವ ಮಾಹಿತಿ ಇದ್ದು, ನಮಗೆ ಮಸ್ಕಿ ಕೇಂದ್ರವಾಗಲಿದೆ.
ಲಕ್ಷ್ಮಿದೇವಿ ಗುರಿಕಾರ್
ತಾಪಂ ಅಧ್ಯಕ್ಷೆ, ಸಿಂಧನೂರು *ಯಮನಪ್ಪ ಪವಾರ