Advertisement

ಟೇಕಾಫ್ ಆಗದ ಫೋರ್ಡ್‌- ಮಹೀಂದ್ರಾ ಜಂಟಿ ಉದ್ದಿಮೆ

08:02 AM Jan 02, 2021 | |

ಮುಂಬೈ: ದೇಶದ ಪ್ರಮುಖ ವಾಹನೋದ್ಯಮ ಸಂಸ್ಥೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಫೋರ್ಡ್‌ ಜಂಟಿಯಾಗಿ ನಡೆಸಲು ಉದ್ದೇಶಿಸಿದ್ದ ಯೋಜನೆ ಕೈಗೊಳ್ಳುವುದಿಲ್ಲ ಎಂದು ಪ್ರಕಟಿಸಿವೆ. ಕೊರೊನಾದಿಂದ ಉಂಟಾಗಿ ರುವ ಸವಾಲಿನ ಪರಿಸ್ಥಿತಿಯ ಹಿನ್ನೆಲೆ ಯಲ್ಲಿ ಈ ನಿರ್ಧಾರ ಕೈಗೊಳ್ಳುತ್ತಿರುವು ದಾಗಿ ಎರಡೂ ಕಂಪನಿಗಳು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿ ರುವ ಹೇಳಿಕೆ ಯಲ್ಲಿ ತಿಳಿಸಿವೆ. ಈ ಬಗ್ಗೆ ತಡ ರಾತ್ರಿಯೇ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಲಿಖೀತ ಮಾಹಿತಿ ಸಲ್ಲಿಸಲಾಗಿದೆ.

Advertisement

ಜತೆಗೆ ಭಾರತದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಫೋರ್ಡ್‌ ಮುಂದಾ ಗಿದೆ. ಫೋರ್ಡ್‌ನ ಪ್ರಧಾನ ಕಚೇರಿ ಮಿಚಿಗನ್‌ನಲ್ಲಿರುವ ಡೆರ್ಬಾರ್ನ್ ನ‌ಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಜಗತ್ತಿನ ಉದ್ದಿಮೆ ಮತ್ತು ವಿತ್ತೀಯ ವ್ಯವಸ್ಥೆಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಜಂಟಿ ಉದ್ದಿಮೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.

ಪಾಲುದಾರಿಕೆ ಕಾರ್ಯ ಸಾಧ್ಯವಾಗದ ಕಾರಣ, ವಹಿವಾಟಿಗೆ ಧಕ್ಕೆಯಾಗಲಾರದು ಎಂದಿದೆ ಮಹೀಂದ್ರಾ. ಮೂಲ ಯೋಜನೆ ಪ್ರಕಾರ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಫೋರ್ಡ್‌ನ ವಹಿ ವಾಟುಗಳ ನೇತೃತ್ವ ವಹಿಸುವುದು ಮತ್ತು ಫೋರ್ಡ್‌ ಅದರಲ್ಲಿ ಶೇ.49ರಷ್ಟು ಪಾಲು ಹೊಂದುವ ಬಗ್ಗೆ ಚರ್ಚಿಸಲಾಗಿತ್ತು. ಅದರಲ್ಲಿ ವಿದ್ಯುತ್‌ ಚಾಲಿತ ವಾಹನಗಳು, ಕಾರುಗಳು ಮತ್ತು ಎಸ್‌ಯುವಿಗಳನ್ನು ಉತ್ಪಾದಿಸುವ ಗುರಿ ಹಾಕ ಲಾಗಿತ್ತು. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಡಿ.31 ದಿನ ನಿಗದಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next