ಬಸವಕಲ್ಯಾಣ: ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿರುವ ಮರಾಠಾ ಸಮಾಜಕ್ಕೆ ಎಲ್ಲ ರಾಜಕೀಯ ಪಕ್ಷಗಳಿಂದ ಅನ್ಯಾಯ
ಮಾಡಲಾಗುತ್ತಿದೆ. ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಮರಾಠಾ ಸಮಾಜ ಎಚ್ಚರಿಸಿದೆ.
ನಗರದ ಸಾಹಿಲ್ ಫಂಕ್ಷನ್ ಹಾಲ್‌ನಲ್ಲಿ ಎಂ.ಜಿ. ಮುಳೆ ಸ್ವಾಭಿಮಾನಿ ಬಳಗದ ಹೆಸರಿನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಮರಾಠಾ ಸಮಾಜದ ಪ್ರಮುಖರು, ಸಮಾಜವನ್ನು ಕಡೆಗಣಿಸಿದ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರೆ ನೀಡಿದರು. ಸಮಾಜದ ಜನರು ಬಿಜೆಪಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಎಂಪಿ ಭಗವಂತ ಖೂಬಾ ಅವರ ವಿರುದ್ಧ ಘೋಷಣೆ ಕೂಗಿದರು. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪ ರ್ಧಿಸುವಂತೆ
ಮುಳೆ ಅವರ ಮೇಲೆ ಒತ್ತಡ ಹೇರಿದರು.
ಮಾಜಿ ಶಾಸಕ ಎಂ.ಜಿ.ಮುಳೆ ಮಾತನಾಡಿ, 14 ವರ್ಷಗಳ ವನವಾಸ ಅಂತ್ಯವಾಗಿದೆ. ಈ ಸಾರಿ ತಾವು ವಿಧಾನಸಭೆಗೆ ಹೋಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ. ಬರುವ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎನ್ನುವುದನ್ನು ಜನರು ತೀರ್ಮಾನಿಸಿದ್ದಾರೆ. ಕ್ಷೇತ್ರದ ಜನರಲ್ಲಿ ಮನೆ ಮಾಡಿರುವ ಭಯದ ವಾತವರಣ ತೊಲಗಿಸಬೇಕು ಎನ್ನುವುದು ನನ್ನ ಗುರಿಯಾಗಿದೆ. ಕ್ಷೇತ್ರದಿಂದ ತಾವು ಸ್ಪರ್ಧಿಸುವುದು ನಿಶ್ವಿತವಾಗಿದೆ.
ಏ. 14ರಂದು ಬೆಂಗಳೂರಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೆಕೆಎಂಪಿ ಜಿಲ್ಲಾಧ್ಯಕ್ಷರ ಮೂಲಕ ಸಂದೇಶ ಕಳಿಸಿದ್ದಾರೆ. ನನ್ನನ್ನು ಕರೆದುಕೊಂಡು ಬರುವಂತೆ ಅವರಿಗೆ ತಿಳಿಸಿದ್ದಾರಂತೆ. ಹೀಗಾಗಿ 14 ನಂತರ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದರು.
ಮರಾಠಾ ಸಮಾಜದ ಹಿರಿಯ ಮುಖಂಡ ಕಿಶನರಾವ ಇಂಚೂರಕರ್, ಕೆಕೆಎಂಪಿ ಜಿಲ್ಲಾಧ್ಯಕ್ಷ ದಿಗಂಬರಾವ ಮಾನಕಾರಿ, ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ್ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಅಮೀರಸಾಬ್ ಅತ್ತಾರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೀರ್ ವಾರೀಸಲಿ, ನಗರಸಭೆ ಸದಸ್ಯ ರವೀಂದ್ರ ಕೊಳಕೂರ, ಶಿವಾಜಿ ಸಿತಾಳಗೇರಾ, ಚಂದ್ರಕಾತ ಸ್ವಾಮಿ ನಾರಾಯಣಪೂರ, ಸಂದೀಪ ಬಿರಾದಾರ, ಪಾಂಡುರಂಗ ನೀಲೆ ಸೇರಿದಂತೆ ಸಮಾಜದ ಪ್ರಮುಖರು ಮಾತನಾಡಿದರು.
ಕೆಕೆಎಂಪಿ ತಾಲೂಕು ಅಧ್ಯಕ್ಷ ವಿ.ಟಿ.ಸಿಂಧೆ, ತಾಪಂ ಸದಸ್ಯ ಗೋವಿಂದರಾವ ಸೋಮವಂಶಿ, ಸುಭಾಷ ಬಿರಾದಾರ, ವೈಜಿನಾಥ ತಗಾರೆ, ನಾಗೇಶ ಕಲ್ಯಾಣಕರ್, ನಾನಾ ಪಾಟೀಲ, ಅಂಗದ ಪಾಟೀಲ, ಧನರಾಜ ರಾಜೋಳೆ, ಧನರಾಜ ಬೈನೆ, ಜ್ಞಾನೇಶ್ವರ
ಮುಳೆ, ಚಿತ್ರಶೇಖರ ಪಾಟೀಲ, ಸೂರ್ಯಕಾಂತ ಪಾಟೀಲ ಹಿರನಾಗಾಂವ, ಬಂಡೆಪ್ಪ ಮೇತ್ರೆ, ಸತೀಶ ಪಾಟೀಲ, ಭೋಜರೆಡ್ಡಿ, ಕಾಮರೆಡ್ಡಿ, ವಾಮನರಾವ ಸೂರ್ಯವಂಶಿ, ಮಹಾದೇವ ಪಾಟೀಲ ಮೈಸಲಗಾ ಭಾಗವಹಿಸಿದ್ದರು.