ಕೊಚ್ಚಿ: ಕಾಸರಗೋಡು ಜಿಲ್ಲೆಯಲ್ಲಿ ಉಗ್ರ ಸಂಘಟನೆ ಐಎಸ್‌ಐಎಸ್‌ಗೆ ಸೇರಲು ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಶೀದುಲ್ ಹಮ್ ಜಾಫರ್ (28) ಎಂಬಾತನನ್ನು ದೋಷಿ ಎಂದು ಪರಿಗಣಿಸಲಾಗಿದೆ.
ನ. 23ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುತ್ತದೆ. ಕೊಚ್ಚಿಯಲ್ಲಿರುವ ಎನ್‌ಐಎಯ ವಿಶೇಷ ಕೋರ್ಟ್ ಬುಧವಾರ ಈ ಬಗ್ಗೆ ಆದೇಶ ನೀಡಿದೆ.
ವಯನಾಡ್ ಜಿಲ್ಲೆಯವನಾಗಿರುವ ಹಮ್ ಜಾಫರ್ ಕಾಸರಗೋಡು ಜಿಲ್ಲೆಯ 14 ಮಂದಿ ಯುವಕರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು 2016ರ ಮೇ ಮತ್ತು ಜುಲೈ ಅವಧಿಯಲ್ಲಿ ಪ್ರಚೋದನೆ ನೀಡಿ, ಭಾರತದ ಗಡಿ ದಾಟಿಸಿ ಉಗ್ರ ಸಂಘಟನೆ ಐಎಸ್‌ಐಎಸ್ ಸೇರಲು ಪ್ರಚೋದನೆ ನೀಡಿದ್ದ ಎಂಬ ಆರೋಪ ಹೊರಿಸಲಾಗಿತ್ತು.
ಇದನ್ನೂ ಓದಿ:ಪಟಾಕಿ ಸಿಡಿಸಿ ಗಾಯಗೊಳಿಸಿದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್
ನಶೀದುಲ್ ಹಮ್ ಜಾಫರ್ ಕೂಡ 2017ರಲ್ಲಿ ದೇಶದ ಗಡಿ ದಾಟಿ ಮಸ್ಕತ್, ಒಮಾನ್, ಇರಾನ್ ಮೂಲಕ ಕಾಬೂಲ್ ತಲುಪಿದ್ದ. ಅಲ್ಲಿ ಆತನನ್ನು ಬಂಧಿಸಲಾಗಿತ್ತು. ನಂತರ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಆತನನ್ನು ಬಂಧಿಸಲಾಗಿತ್ತು.