Advertisement

ತೊಗರಿ ಖರೀದಿಗೆ ರೈತರ ಒತ್ತಾಯ

05:02 PM May 24, 2017 | Team Udayavani |

ಆಳಂದ: ಬಾಕಿ ಉಳಿದ ರೈತರ ತೊಗರಿ ಖರೀದಿ ಮಾಡಬೇಕು. ಸಾಲಮನ್ನಾ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ವಿವಿಧ ರೈತಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ರೈತರು ಪ್ರತಿಭಟನೆ ಕೈಗೊಂಡು ಸರ್ಕಾರವನ್ನು ಒತ್ತಾಯಿಸಿದರು. 

Advertisement

ನೇಗಿಲಯೋಗಿ ಒಕ್ಕೂಟದ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಕಿಸಾನ ಮತ್ತು ಕೃಷಿ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿ ರವಿಂದ್ರ ಪಾಟೀಲ, ಎಐಕೆಎಸ್‌ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ನೇತೃತ್ವದಲ್ಲಿ ಪ್ರತಿಭಟನೆ  ನಡೆಸಿದ ರೈತರು ಕೂಡಲೇ ತೊಗರಿ ಖರೀದಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು. 

ರೈತರ ಸಾಲಮನ್ನಾ ಮಾಡಿ. ಸಕಾಲಕ್ಕೆ ಹೊಸ ಸಾಲವನ್ನು  ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ಯಾಕೇಜ್‌ ರೂಪದಲ್ಲಿ ನೀಡಿ. ಬೆಳೆ ವಿಮೆ ಬಿಡುಗಡೆಯಲ್ಲಿ ಆದ ತಾರತಮ್ಯ ಸರಿಪಡಿಸಿ ಅನ್ಯಾಯವಾದ ರೈತರಿಗೆ ನ್ಯಾಯ ಒದಗಿಸಿ.  ಎಲ್ಲ ವಿಮೆ ಮೊತ್ತವನ್ನು ಬಿಡುಗಡೆ ಮಾಡಬೇಕು. ಬಿತ್ತನೆ ಬೀಜ, ಗೊಬ್ಬರವನ್ನು ಸಕಾಲಕ್ಕೆ ವಿತರಣೆ ಮಾಡಿ ಎಂದು ಒತ್ತಾಯಿಸಿದರು.

ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಎಸ್‌.ಡಿ. ಸಾಗರಶೆಟ್ಟಿ, ಕಲ್ಯಾಣಿ ಅವುಟೆ, ಶ್ರೀಶೈಲ ಚಚಕೋಟಿ, ಕಲ್ಯಾಣಿ ಮಲಶೆಟ್ಟಿ, ಚಂದ್ರಕಾಂತ ಖೋಬ್ರೆ ಹಾಗೂ ರೈತರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next