ರಸ್ತೆಯನ್ನು ಬೀರೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ್ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಗ್ರಾಮಸ್ಥರಾದ ನಾರಾಯಣ
ಸ್ವಾಮಿ, ನಸಿಂಹಮೂರ್ತಿ, ಗೌರಮ್ಮ, ಸುಬ್ರಹ್ಮಣ್ಯ, ಗಂಗರತ್ನ, ರಾಜಮ್ಮ, ರಮ್ಯಾ, ನಾಗಮ್ಮ, ಭಾಗ್ಯಾ ಮುಂತಾದವರು,
ಸೋಮೇನಹಳ್ಳಿ ಗ್ರಾಮದ ರಸ್ತೆಯನ್ನು ಬೆಂಗಳೂರು ನಿವಾಸಿಯಾದ ಬೀರೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ್
ತನ್ನ ಸ್ವಾರ್ಥಕ್ಕಾಗಿ ಯಾರ ಅನುವತಿಯನ್ನು ಪಡೆಯದೇ ದೇವಸ್ಥಾನದ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡು ಕಟ್ಟಡ
ಕಟ್ಟಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಅಧಿಕಾರಿಗೆ
ದೂರು ನೀಡಿದ್ದರೂ ಇದುವರಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
Advertisement
ಡೀಸಿ ಕ್ರಮ ಕೈಗೊಂಡಿಲ್ಲ: ಗ್ರಾಮಸ್ಥ ನಾರಾಯಣಸ್ವಾಮಿ ಮಾತನಾಡಿ, ನೂರಾರು ವರ್ಷಗಳಿಂದ ಸೋಮೇನಹಳ್ಳಿ ಗ್ರಾಮದ ಬೀರೇಶ್ವರ ದೇವಸ್ಥಾನದ ಮುಂಭಾಗ 8 ಅಡಿ ಜಾಗದಲ್ಲಿ ಸರ್ಕಾರಿ ರಸ್ತೆ ಇದೆ. ಈ ರಸ್ತೆಯಲ್ಲಿಯೇ ಗ್ರಾಮಸ್ಥರು ದಿನ ನಿತ್ಯ ಓಡಾಡುತ್ತಾರೆ. ಇದೀಗ ಬೆಂಗಳೂರಿನ ಶ್ರೀನಿವಾಸ್ ಸೋಮೇನಹಳ್ಳಿ ಗ್ರಾಮದಲ್ಲಿ ಒಂದು ಎಸ್ಟೇಟ್ ಮತ್ತು ಕಾಲೇಜು ನಿರ್ಮಾಣ ಮಾಡಿಕೊಂಡಿದ್ದಾರೆ. ಬೀರೇಶ್ವರ ದೇವಸ್ಥಾನದ ಮುಂಭಾಗ ಮಂಟಪ ನಿರ್ಮಾಣ ಮಾಡುವ ಉದ್ದೇಶದಿಂದ ಓಡಾಡುವ ಸರ್ಕಾರಿ ರಸ್ತೆ ಜಾಗದಲ್ಲಿ ಯಾರ ಗಮನಕ್ಕು ಬಾರದೆ ದೊಡ್ಡ ಗುಂಡಿಗಳನ್ನು ಅಗೆದು ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿ ತಿಂಗಳು ಕಳೆದರೂ ಯಾವುದೇ ಕ್ರಮ
ಕೈಗೊಂಡಿಲ್ಲ. ರಸ್ತೆಯಲ್ಲಿ ಗುಂಡಿಗಳನ್ನು ಅಗೆದಿರುವುದರಿಂದ ಮಕ್ಕಳು, ವೃದ್ಧರು ಓಡಾಡಲು ತೊಂದರೆಯಾಗಿದೆ ಎಂದರು.
ಓಡಾಡಲು ಸರ್ಕಾರಿ ರಸ್ತೆ ಇದೆ. ಈಗ ಶ್ರೀನಿವಾಸ ಅವರು ಈಗಿನ ರಸ್ತೆ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣ
ಮಾಡಬೇಕಾಗಿದೆ. ಆದ್ದರಿಂದ, ನಿಮಗೆ ಬೇರೆ ಕಡೆ ರಸ್ತೆಗೆ ಜಾಗ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ನಮಗೆ ಇದೇ
ರಸ್ತೆ ಬೇಕಾಗಿರುವುದರಿಂದ ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ ಎಂದು ಗ್ರಾಮದ ಮಹಿಳೆ ಗೌರಮ್ಮ
ಹೇಳಿದರು.