ಶಹಾಬಾದ: ನಗರದ ಹಳೆ ಶಹಾಬಾದನ ಶಿಬಿರ ಕಟ್ಟಾ ಬಡಾವಣೆಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಎಐಡಿವೈಒ ಸಂಘಟನೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಶಿಬಿರ ಕಟ್ಟಾ ಬಡಾವಣೆಯಲ್ಲಿ ಕೆಲವು ಕಡೆ ರಸ್ತೆ ಬದಿಯಲ್ಲಿ ಮತ್ತು ಬಡಾವಣೆಯಲ್ಲಿ ಸಾಕಷ್ಟು ಜಾಲಿ ಗಿಡ, ಕಂಠಿ ಗಿಡಗಳು ಬೆಳೆದಿರುವುದರಿಂದ ಸಾಕಷ್ಟು ಬೆಳೆದಿರುವುದರಿಂದ ಹಾವು, ಚೇಳು, ಹುಳಗಳು ಓಡಾಡುತ್ತಿವೆ. ಬಿದಿ ದೀಪ ಇಲ್ಲದೇ ರಾತ್ರಿ ಆತಂಕದಿಂದ ಓಡಾಡುವಂತೆ ಆಗಿದೆ.
ಒಂದು ವರ್ಷದಲ್ಲಿ ಹಾವು ಕಡಿದು ನಾಲ್ಕು ಜನ ಮೃತಪಟ್ಟಿದ್ದು ನೋವಿನ ಸಂಗತಿಯಾಗಿದೆ. ಆದ್ದರಿಂದ ನಗರಸಭೆ ಕೂಡಲೇ ಬಡಾವಣೆಯಲ್ಲಿ ಬೆಳೆದಿರುವ ಜಾಲಿ-ಗಿಡಗಂಟಿಗಳನ್ನು ಸ್ವತ್ಛಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಕೆಲವು ವರ್ಷಗಳಿಂದ ಕೆಟ್ಟುಹೋಗಿರುವ ಬೋರವೆಲ್‌ಗಳನ್ನು ಯಾವ ಜನ ಪ್ರತಿನಿಧಿ ಗಳು ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ.
ಕುಡಿಯುವ ನೀರಿಗೋಸ್ಕರ ಬಡಾವಣೆ ಹೊರ ಭಾಗದಲ್ಲಿರುವ ಪಾಲಿಷ್ ಮಿಷನ್ ಗಳಿಗೆ ಹೋಗಿ ನೀರು ತರುವ ಪರಿಸ್ಥಿತಿಯಾಗಿದೆ. ಹೀಗಾಗಿ ಕೆಟ್ಟುಹೋಗಿರುವ ಬೋರವೆಲ್‌ಗಳನ್ನು ದುರಸ್ತಿ ಮಾಡಬೇಕೆಂದು ಎಐಡಿವೈಒ ಶಹಾಬಾದ ಸ್ಥಳೀಯ ಸಮಿತಿಯಿಂದ ನಗರಸಭೆ ಪೌರಯುಕ್ತರು ಹಾಗೂ ಅಧ್ಯಕ್ಷರಿಗೆ ಮನವಿ ಪತ್ರ ಸಲಿಸಲಾಯಿತು.
ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಎಚ್, ಸ್ಥಳೀಯ ಅಧ್ಯಕ್ಷ ರಘು ಪವಾರ, ಕಾರ್ಯದರ್ಶಿ ರಮೇಶ ದೇವಕರ್, ತಿಮ್ಮಯ್ಯ ಮಾನೆ, ನಿಲಕಂಠ ಹುಲಿ, ಬಡವಣೆಯ ಯುವಕರಾದ ದೇವದಾಸ್, ದುರ್ಗಪ್ಪ, ಬಸವರಾಜ, ಬಾಬು, ನರೇಶ, ವಿಕಾಸ, ಶಿವಕುಮಾರ, ದೀಪಕ್, ಸ್ವಾಮಿ, ತೇಜಸ್ ಆರ್. ಇಬ್ರಾಹಿಂಪುರ ಇತರರು ಇದ್ದರು.