Advertisement

ನೇಕಾರರ ಉಪಜಾತಿ ಪರಿಗಣಿಸಲು ಒತ್ತಾಯ

09:56 AM Jul 18, 2022 | Team Udayavani |

ಕಲಬುರಗಿ: ರಾಜ್ಯದಲ್ಲಿ ಅನೇಕ ಹೆಸರಿನಲ್ಲಿ ಕರೆಯಲ್ಪಡುವ 20ಕ್ಕೂ ಹೆಚ್ಚು ಒಳಪಂಗಡಗಳನ್ನು ಒಟ್ಟು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನೇಕಾರ ಉಪ ಜಾತಿಗಳ ಒಕ್ಕೂಟದ ಸದಸ್ಯರು ಶನಿವಾರ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದರು.

Advertisement

ನಿಯೋಗದಲ್ಲಿ ಸಪ್ತ ನೇಕಾರ ಜನಾಂಗದ, ದೇವಸಾಲಿ, ಪಟ್ಟಸಾಲಿ, ಪದ್ಮಸಾಲಿ , ಸ್ವಕುಳಸಾಲಿ, ಕುರಹಿನಶೆಟ್ಟಿ, ದೇವಾಂಗ, ಹಟಗಾರ, ಕೋಷ್ಠಿ, ತೊಗಟವೀರ, ಸಮಾಜದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿ ರಾಜ್ಯದ ಒಟ್ಟು ನೇಕಾರ ಉಪಜಾತಿಗಳನ್ನು ಒಂದೇ ನೇಕಾರ ಹೆಸರಿನ ಅಡಿಯಲ್ಲಿ ಪರಿಗಣಿಸಬೇಕು ಎಂದು ಕೋರಿದರು.

ನೇಕಾರರ ಮೀಸಲಾತಿ ದೊರಕುವಂತೆ ಆಯೋಗ ಸರಕಾರಕ್ಕೆ ವರದಿ ಮಾಡುವಾಗ ಏಕೀಕರಣಗೊಳಿಸಿ ಸಲ್ಲಿಸಬೇಕು ಎಂದು ಕೊರಲಾಯಿತು. ಹಟಗಾರ ಸಮಾಜದ ಅಧ್ಯಕ್ಷ ನಿಂಬೆನ್ನಿ, ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ, ಚಂದ್ರಶೇಖರ್‌ ಮ್ಯಾಳಗಿ, ಸಂತೋಷ ಗುರಮಿಠಕಲ್‌, ಶ್ರೀನಿವಾಸ ಬಲಪೂರ್‌, ಜೆ. ವಿನೋದ ಕುಮಾರ, ಶಿವಲಿಂಗಪ್ಪಾ ಅಷ್ಟಗಿ, ಮತ್ತು ಕೋಷ್ಠಿ ಸಮಾಜದ ರಾಜು ಕೋಷ್ಠಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next