ನವದೆಹಲಿ: ಬಲವಂತದ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶನಿವಾರ (ಜುಲೈ 03) ಉತ್ತರಪ್ರದೇಶ ಮತ್ತು ದೆಹಲಿಯ ಆರು ಸ್ಥಳಗಳಲ್ಲಿ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ: ಕಾಂಗ್ರೆಸ್
ದೆಹಲಿಯ ಜಾಮೀಯಾ ನಗರದ ಪ್ರದೇಶದಲ್ಲಿನ ಇಸ್ಲಾಮಿಕ್ ದಾವಾಹ್ ಕೇಂದ್ರ(ಐಡಿಸಿ), ಮುಖ್ಯ ಆರೋಪಿ ಮೊಹಮ್ಮದ್ ಉಮರ್ ಗೌತಮ್ ಮತ್ತು ಅವರ ಸಹವರ್ತಿ ಮುಫ್ತಿ ಖಾಜಿ ಜಹಾಂಗೀರ್ ಕಾಸ್ಮಿ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಲಕ್ನೋದಲ್ಲಿರುವ ಅಲ್ ಹಸನ್ ಶಿಕ್ಷಣ ಮತ್ತು ಅಭಿವೃದ್ಧಿ ಫೌಂಡೇಶನ್ ಮತ್ತು ಶಿಕ್ಷಣ ಮಾರ್ಗದರ್ಶನ ಮತ್ತು ಅಭಿವೃದ್ದಿ ಕಲ್ಯಾಣ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು. ಈ ಸಂಸ್ಥೆಗಳನ್ನು ಮುಖ್ಯವಾಗಿ ಉಮರ್ ಗೌತಮ್ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರು ಬಲವಂತದಿಂದ ಧಾರ್ಮಿಕ ಮತಾಂತರಗೊಳಿಸುತ್ತಿದ್ದ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವುದಾಗಿ ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.