Advertisement

ಮಗು ಹೆರಲು ಬಲಾತ್ಕರಿಸುವುದು ತಪ್ಪು: ಹೈಕೋರ್ಟ್‌

09:12 PM Jul 12, 2023 | Team Udayavani |

ಲಕ್ನೋ: “ಲೈಂಗಿಕ ದೌರ್ಜನ್ಯದ ಪರಿಣಾಮವಾಗಿ ಗರ್ಭಧರಿಸಿದ ಮಹಿಳೆಯನ್ನು ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸಲಾಗುವುದಿಲ್ಲ. ಏಕೆಂದರೆ ಅದು ವಿವರಿಸಲಾಗದ ದುಃಖಗಳಿಗೆ ಕಾರಣವಾಗುತ್ತದೆ’ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

Advertisement

12 ವರ್ಷದ ಕಿವುಡ ಮತ್ತು ಮೂಕ ಬಾಲಕಿಯ ಮೇಲೆ ನೆರಮನೆಯಾತ ಅನೇಕ ಬಾರಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಅಂಗವೈಕಲ್ಯದ ಕಾರಣ ಯಾರಿಗೂ ಸರಿಯಾಗಿ ಹೇಳಲು ಸಾಧ್ಯವಾಗಿಲ್ಲ. ತಾಯಿ ನಿಕಟವಾಗಿ ಪ್ರಶ್ನಿಸಿದಾಗ, ಆಕೆ ಈ ಬಗ್ಗೆ ಸಾಂಕೇತಿಕ ಭಾಷೆಯಲ್ಲಿ ವಿವರಿಸಿದ್ದಾಳೆ. ಈ ಕುರಿತು ತಾಯಿ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆ 23 ವಾರಗಳ ಗರ್ಭ ಧರಿಸಿರುವುದು ತಿಳಿದುಬಂದಿದೆ. ಪ್ರಸ್ತುತ 24 ವಾರಗಳು ಆಗಿರುವ ಹಿನ್ನೆಲೆಯಲ್ಲಿ ಗರ್ಭ ತೆಗೆಯಲು ಅವಕಾಶ ನೀಡುವಂತೆ ಕೋರಿ ಬಾಲಕಿ ಅರ್ಜಿ ಸಲ್ಲಿಸಿದ್ದಾಳೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮಹೇಶ್‌ ಚಂದ್ರ ತ್ರಿಪಾಠಿ ಮತ್ತು ನ್ಯಾ. ಪ್ರಶಾಂತ್‌ ಕುಮಾರ್‌ ಅವರಿದ್ದ ನ್ಯಾಯಪೀಠ, ಬಾಲಕಿಯ ತಪಾಸಣೆ ನಡೆಸಲು ಐದು ಸದಸ್ಯರ ವೈದ್ಯಕೀಯ ಮಂಡಳಿ ರಚಿಸುವಂತೆ ಅಲಿಘಡ ಮುಸ್ಲಿಂ ವಿವಿಗೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next