Advertisement

ಪುನರ್ವಸತಿಗಾಗಿ ಕುನ್ನಪಟ್ಟಣ ಗ್ರಾಮಸ್ಥರ ಒತ್ತಾಯ

12:39 PM Oct 04, 2017 | |

ಎಚ್‌.ಡಿ.ಕೋಟೆ: ತಾಲೂಕಿನ ಕುನ್ನಪಟ್ಟಣವು ತಿಮ್ಮಪ್ಪನ ಬೆಟ್ಟದ ಪಾದ(ತಳ)ದಲ್ಲಿದ್ದು 10 ವರ್ಷಗಳಿಂದಲೂ ಮೂಲಸೌಲಭ್ಯದಿಂದ ವಂಚಿತವಾಗಿದೆ. ಜೊತೆಗೆ ಗ್ರಾಮದ ಮಧ್ಯಭಾಗದಲ್ಲಿ ಕಾಲುವೆ ಹಾಯ್ದುಹೋಗಿದೆ ಹೀಗಾಗಿ ಕೂಡಲೇ ಗ್ರಾಮವನ್ನು ಕಂದಾಯ ಇಲಾಖೆಯೂ ಕಾಯ್ದಿರಿಸಿರುವ ಬದಲಿ ಜಾಗಕ್ಕೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಕುನ್ನಪಟ್ಟಣ ಗ್ರಾಮದ ಮುಖಂಡರಾದ ಬಿ.ಬೆಟ್ಟನಾಯ್ಕ ಹಾಗೂ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮಹದೇವನಾಯ್ಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ಶಾಸಕರಾಗಿದ್ದ ಸಂದರ್ಭ ಕಂದಾಯ ಇಲಾಖೆ ಅಧಿಕಾರಿಗಳ ಜೋತೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಗ್ರಾಮವು ತಿಮ್ಮಪ್ಪನ ಬೆಟ್ಟದ ತಳಭಾಗದಲ್ಲಿರುವುದರಿಂದ ಇಲ್ಲಿನ ನಿವಾಸಿಗಳ ಮನೆ ಮೇಲೆ ದೊಡ್ಡ ಬಂಡೆಗಳು ಉರುಳಿ ಮನೆಗಳು ನಾಶವಾಗಿತ್ತಿವೆ

ಹಾಗೂ ಗ್ರಾಮದ ಮಧ್ಯಬಾಗದಲ್ಲೇ ಕಾಲುವೆ ಹಾಯ್ದು ಹೋಗಿರುವುದರಿಂದ  ಜನರು ಆತಂಕದಲ್ಲಿ ಜೀವನ ಮಾಡುತ್ತಿದ್ದಾರೆ ಈ ಗ್ರಾಮದ ಪಕ್ಕದಲ್ಲಿಯೇ 25 ಎಕರೆ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸರ್ಕಾರ ತಿಳಿಸಿ ಬಹಳಷ್ಟು ವರ್ಷಗಳು ಕಳೆದರೂ ಇನ್ನೂ ಕಲ್ಪಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಆಮರಣಾಂತ ಉಪವಾಸ: ಪರಿಣಾಮ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಕೂಡ ಸಲ್ಲಿಸಿದ್ದರೂ, ನಮಗೆ ಇನ್ನು ಪುರ್ನವಸತಿ ಕಲ್ಪಿಸಿಲ್ಲ ಇಲ್ಲಿನ ಜನರು ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಸ್ಥಳಾಂತರ ಮಾಡಿ ಪುರ್ನವಸತಿ ಕಲ್ಪಿಸಿ ಗ್ರಾಮದ ಜನರಿಗೆ ಸೌಲಭ್ಯ ಕಲ್ಪಿಸದಿದ್ದರೇ ತಾಲೂಕು ಆಡಳಿತ ಎದುರು ಗ್ರಾಮದಲ್ಲಿ ವಾಸಿಸುವ 600ಕ್ಕೂ ಹೆಚ್ಚು ಜನರು ಅಮರಣಾಂತರ ಉಪವಾಸ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜನಪ್ರತಿನಿಧಿಗಳ ಪಿತೂರಿ: ಈ ಮಧ್ಯೆ ಗ್ರಾಮದ ಜನರೆಲ್ಲ ಗ್ರಾಮ ಜನರನ್ನು ಸ್ಥಳಾಂತರ ಮಾಡಿ ಪುರ್ನವಸತಿ ಕಲ್ಪಿಸಬೇಕು ಎಂದು ಗ್ರಾಮದ ಬಾಗಶಃ ನಿವಾಸಿಗಳು ಆಗ್ರಹಿಸಿ ಹೋರಾಟ ತೀವ್ರಗೊಳಿಸಿರುವ ವೇಳೆಯಲ್ಲಿ ಇಲ್ಲಿನ ಚುನಾಯಿತ ಜನಪ್ರತಿನಿಧಿಗಳು ಗ್ರಾಮದಲ್ಲಿ ವಾಸಿಸುತ್ತಿರುವ ಮನೆ ಇರುವ ಏಳು ಕುಟುಂಬಗಳಿಗೆ ಕೊತ್ತೇಗಾಲ ಪಂಚಾತಿಯಿಂದ ಪಂಚಾಯತ್‌ ರಾಜ್‌ ನಿಯಮ ಉಲ್ಲಂ ಸಿ ಏಕಪಕ್ಷಿಯವಾಗಿ ಅಶ್ರಯ ಮನೆ ಮಂಜೂರು ಮಾಡಿಸಿ ಗ್ರಾಮದ ಜನರಲ್ಲಿ ಅಶಾಂತಿಯನ್ನುಂಟು ಮಾಡಿದ್ದಾರೆ.

Advertisement

ಹಿಂದಯೂ 30 ಮನೆ ವಾಪಸ್‌: ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವಧಿಯಲ್ಲಿಯೇ ಗ್ರಾಮಕ್ಕೆ 30 ಗುಂಪು ಮನೆ ಮಂಜೂರು ಆಗಿದ್ದವು, ಆಗ ಅಗಿನ ತಹಶೀಲ್ದಾರ್‌ ಬಂದು ಸ್ಥಳ ಪರಿಶೀಲಿಸಿ ಗ್ರಾಮ ಸ್ಥಳ ಜನರು ವಾಸಿಸಲು ಯೋಗ್ಯ ಸ್ಥಳವಲ್ಲ ಇವರನ್ನು ಸ್ಥಳಾಂತರ ಮಾಡಿ ಸೌಲಭ್ಯ ಕಲ್ಪಿಸಬೇಕು ಎಂದು ಬಂದಿದ್ದ ಅಷ್ಟು ಮನೆಗಳನ್ನು ವಾಪಸ್‌ ಕಳುಹಿಸಿದ್ದರು.

ಅಲ್ಲದೆ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರು ಕೂಡ ಇದೇ ಮಾತನ್ನು ಹೇಳಿ ಪುನರ್ವಸತಿಗೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದರು. ಕುನ್ನಪಟ್ಟಣ ಗ್ರಾಮದ ಮುಖಂಡರಾದ ಎನ್‌.ಲಿಂಗರಾಜು, ಬಿ.ಬೆಟ್ಟನಾಯ್ಕ, ಮಹದೇವನಾಯ್ಕ, ಸಣ್ಣ ವೆಂಕಟನಾಯ್ಕ, ಗ್ರಾಮದ ಯಜಮಾನ ಬೆಟ್ಟನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next