Advertisement
3.5 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ 6 ಸ್ಥಾನ ಜಿಗಿದಿರುವ ಅಂಬಾನಿ ಅವರು 13 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಅಂಬಾನಿ ಅವರು 50 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 19 ನೇ ಸ್ಥಾನ ಪಡೆದಿದ್ದರು.
Related Articles
Advertisement
ಟಾಪ್ 100 ಶ್ರೀಮಂತರಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು 36 ನೇ ಸ್ಥಾನ ಪಡೆದು 2 ನೇ ಶ್ರೀಮಂತ ಭಾರತೀಯ ಎನಿಸಿಕೊಂಡಿದ್ದಾರೆ.22.6 ಬಿಲಿಯನ್ ಯುಎಸ್ ಡಾಲರ್ ಅವರ ಆಸ್ತಿ ಮೌಲ್ಯವಾಗಿದೆ. ಎಚ್‌ಸಿಎಸ್ ಸಂಸ್ಥಾಪಕ ಶಿವ ನಾಡರ್ ಅವರು 14.4 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 82 ನೇ ಸ್ಥಾನ ಪಡೆದಿದ್ದಾರೆ. ಅರ್ಸೆಲೊರ್ ಮಿತ್ತಲ್‌ನ ಲಕ್ಷ್ಮೀ ಮಿತ್ತಲ್ ಅವರು 14.1 ಬಿಲಿಯನ್ ಆಸ್ತಿಯೊಂದಿಗೆ 91 ನೇ ಸ್ಥಾನ ಪಡೆದಿದ್ದಾರೆ.
ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರ್ ಬಿರ್ಲಾ 122 ನೇ ಸಾœನ, ಅದಾನಿ ಗ್ರೂಪ್‌ನ ಗೌತಮ್ ಅದಾನಿ 167, ಭಾರತಿ ಎರ್‌ಟೆಲ್‌ನ ಸುನಿಲ್ ಮಿತ್ತಲ್ 244 ನೇ ಸ್ಥಾನ, ಪತಂಜಲಿಯ ಆಚಾರ್ಯ ಬಾಲಕೃಷ್ಣ ಅವರು 365 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಂದಹಾಗೆ ಮುಖೇಶ್ ಸಹೋದರ ಅನಿಲ್ ಅಂಬಾನಿ ಅವರು 1.8 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 1349 ನೇ ಸ್ಥಾನ ಪಡೆದುಕೊಂಡಿದ್ದಾರೆ.