Advertisement

ಯುವತಿಯ ಮೈ ಮುಟ್ಟಿದ್ದಕ್ಕೆ ಅರ್ಧ ತಲೆ ಬೋಳಿಸಿ ಲಂಗದಲ್ಲಿ ಮೆರವಣಿಗೆ!

03:42 PM Jul 15, 2017 | |

ವಿಜಯಪುರ : ಸಿಂಧಗಿಯ ಹಿಟ್ನಳ್ಳಿ ತಾಂಡಾದಲ್ಲಿ ಯುವತಿಗೆ ಕಿರುಕುಳ ನೀಡಿದ ಎಂಬ ಕಾರಣಕ್ಕೆ ಮಧ್ಯವಯಸ್ಕ ಪುರಷನೊಬ್ಬನ ಅರ್ಧ ತಲೆ,ಮೀಸೆ ಬೋಳಿಸಿ, ಚಪ್ಪಲಿ ಹಾರ ಹಾಕಿ, ಲಂಗ ಹಾಕಿಸಿ ಊರ ತುಂಬೆಲ್ಲಾ ಮೆರವಣಿಗೆ ಮಾಡಿದ ಘಟನೆ ನಡೆದಿದೆ.

Advertisement

ಹತ್ತಾರು ಜನರು ಯುವತಿಯ ಮೈ ಮುಟ್ಟಿ ಮಾತನಾಡಿದ್ದನ್ನು ಆಕ್ಷೇಪಿಸಿ ಶಂಕರ್‌ ಎಂಬಾತನನ್ನು ಹಿಡಿದು ಥಳಿಸಿ ಶಿಕ್ಷೆ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿ ಶಂಕರ್‌ನನ್ನು ವಶಕ್ಕೆ ಪಡೆದಿದ್ದಾರೆ.

ಹಲ್ಲೆ ಸಂಬಂಧ ಶಂಕರ್‌ ಕುಟುಂಬಸ್ಥರೂ ಯುವತಿಯ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೂನ್‌ 11 ರಂದು ಈ ಘಟನೆ ನಡೆದಿದ್ದು ,ಇದೀಗ ವಿಡಿಯೋ ಕೂಡ ಹರಿದಾಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next