ಬೇಕಾಗುವ ಸಾಮಗ್ರಿ
ಗೋಧಿ ಹಿಟ್ಟು 2 ಕಪ್
ಅಡುಗೆ ಎಣ್ಣೆ 6 ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಶೇಂಗಾ 1 ಕಪ್
ಎಳ್ಳು ಕಾಲು ಕಪ್
ಕಪ್ ಬೆಲ್ಲ ಮುಕ್ಕಾಲು ಕಪ್
ಏಲಕ್ಕಿ ಸ್ವಲ್ಪ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ 2 ಕಪ್ ಗೋಧಿ ಹಿಟ್ಟು ಹಾಕಿ ಮತ್ತು ಅದಕ್ಕೆ ಬೇಕಾದಷ್ಟು ಉಪ್ಪು ಸೇರಿಸಿ. ಅನಂತರ ಅದಕ್ಕೆ ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆದುವಾದ ಹಿಟ್ಟು ತಯಾರಿಸಿಕೊಳ್ಳಿ. ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ 30 ನಿಮಿಷಗಳ ಕಾಲ ಹಾಗೆಯೇ ಇಡಿ.
ಅದೇ ಸಮಯದಲ್ಲಿ ಶೇಂಗಾವನ್ನು ಕೆಂಪಾಗುವವರೆಗೆ ಹುರಿದುಕೊಳ್ಳಿ. ಅನಂತರ ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ. ಈಗ ಹುರಿದ ಶೇಂಗಾ, ಎಳ್ಳು ಮತ್ತು ಏಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅನಂತರ ಅದಕ್ಕೆ ಬೆಲ್ಲವನ್ನು ಸೇರಿಸಿ ಗ್ರೈಂಡ್ ಮಾಡಿ. ಚೆನ್ನಾಗಿ ಮಿಕ್ಸ್ ಆದ ಪುಡಿಯನ್ನು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ನೀರು ಅಥವಾ ಹಾಲು ಸಿಂಪಡಿಸಿ. ಅನಂತರ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.
ಈಗ ಮೊದಲೇ ತಯಾರಿಸಿದ ಗೋಧಿ ಹಿಟ್ಟಿನ್ನು ಸ್ವಲ್ಪವೆ ತೆಗೆದುಕೊಂಡ ಅದರೊಳಗಡೆ ಶೇಂಗಾದ ಉಂಡೆಯನ್ನು ಸೇರಿಸಿ ಚಪಾತಿ ಲಟ್ಟಿಸಿದ ಮಾದರಿಯಲ್ಲಿ ಲಟ್ಟಿಸಿಕೊಳ್ಳಬೇಕು. ಅನಂತರ ಅದನ್ನು ತವಾದಲ್ಲಿ ಹಾಕಿ ಅದು ಸ್ವಲ್ಪ ಉಬ್ಬುವವರೆಗೆ ಚೆನ್ನಾಗಿ ಕಾಯಿಸಬೇಕು. ಎರಡು ಬದಿಯೂ ಚೆನ್ನಾಗಿ ಬೇಯಬೇಕು. ಈಗ ಶೇಂಗಾ ಹೊಳಿಗೆ ತಿನ್ನಲು ರೆಡಿ. ಇದನ್ನು ತುಪ್ಪದೊಂದಿಗೆಯೂ ತಿನ್ನಬಹುದು.