Advertisement

ಜನರಿಗೆ ಇ- ಬ್ಯಾಂಕಿಂಗ್‌, ಕ್ಯಾಸ್‌ ಲೆಸ್‌ ವ್ಯವಹಾರದ  ಮಾಹಿತಿ ಕೊರತೆ

12:43 PM Nov 28, 2018 | |

.ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ಕ್ಷೇತ್ರದತ್ತ ಆಕರ್ಷಿಸುತ್ತಿದ್ದಾರೆ ಇದಕ್ಕೆ ಕಾರಣ ಏನು?
ಇದಕ್ಕೆ ಮುಖ್ಯ ಕಾರಣ ಜಗತ್ತಿನ ಮೂಲೆ ಮೂಲೆಗಳಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಉತ್ತಮ ಅವಕಾಶಗಳು. ವಾಣಿಜ್ಯ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಲಭಿಸುತ್ತಿದೆ ಹಾಗೂ ಸ್ವಂತ ವ್ಯಾಪಾರ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಹೊಸ ಹೊಸ ಐಡಿಯಾಗಳನ್ನು ಪಡೆದುಕೊಳ್ಳುವ ಅವಕಾಶಗಳು ದೊರೆಯುತ್ತದೆ.ಹಾಗಾಗಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತ್ತಿದೆ.

Advertisement

. ಕ್ಯಾಸ್‌ ಲೆಸ್‌ ಟ್ರಾನ್ಸಾಕ್ಷಾನ್‌ ಬಗ್ಗೆ ನಿಮ್ಮ ಅಭಿಪ್ರಾಯ?
ಇದೊಂದು ಉತ್ತಮ ವ್ಯವಸ್ಥೆ. ತಾಂತ್ರಿಕವಾಗಿ ಮುನ್ನಡೆಯುತ್ತಿರುವ ಇತರ ದೇಶಗಳ ನಡುವೆ ಎದೆ ತಟ್ಟಿ ನಿಲ್ಲುವ ಸಾಮಾರ್ಥ್ಯ ನಮಗೂ ಇರಬೇಕು. ಈ ನಿಟ್ಟಿನಲ್ಲಿ ಕ್ಯಾಸ್‌ ಲೆಸ್‌ ಟ್ರಾನ್ಸಾ ಕ್ಷಾನ್‌ ಉತ್ತಮ ಬೆಳವಣಿಗೆ. ಆದರೆ ಈ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸರಕಾರ ಆಯೋಜಿಸಬೇಕಾಗಿದೆ.

. ಇ- ಬ್ಯಾಂಕಿಂಗ್‌ ನಂತಹ ಸೇವೆಗಳು ಜನಸಾಮಾನ್ಯರಿಗೆ ಸರಿಯಾಗಿ ಮನದಟ್ಟಾಗುತ್ತಿಲ್ಲ. ಇದನ್ನು ಇನ್ನೂ ಹೇಗೆ ಸರಳೀಕರಿಸಬಹುದು?
ಇಷ್ಟು ವರ್ಷ ನಗದು ಹಾಗೂ ಬ್ಯಾಂಕ್‌ ಗಳಿಗೆ ತೆರಳಿ ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದ ಜನರಿಗೆ ಒಮ್ಮೇಲೆ ಈ- ಬ್ಯಾಂಕಿಂಗ್‌ ಸೇವೆಗಳಿಗೆ ಒಗ್ಗಿಕೊಳ್ಳಲು ಕಷ್ಟವಾಗುತ್ತಿರಬಹುದು. ಈ ಬಗ್ಗೆ ಜನರಿಗೂ ಒಂದು ರೀತಿಯ ಭಯದ ವಾತಾವರಣ ಇದೆ. ಹಣದ ವಿಷಯದಲ್ಲಿ ಯಾರಾದರೂ ಮೋಸ ಮಾಡಬಹುದು ಎಂಬ ಹಿಂಜರಿಕೆ ಇದೆ. ಇದನ್ನು ಹೋಗಲಾಡಿಸುವ ಕೆಲಸ ಆಗಬೇಕಾಗಿದೆ. ಮನೆ ಮನೆಗಳಲ್ಲಿ ಇ- ಬ್ಯಾಂಕಿಂಗ್‌ ನಂತಹ ಸೇವೆಗಳ ಬಗ್ಗೆ ತಿಳಿ ಹೇಳುವ ಕಾರ್ಯ ಆಗಬೇಕು.

. ಬಹುತೇಕ ಯುವಕರು ಸ್ವಂತ ಬ್ಯುಸಿನೆಸ್‌ ಮಾಡುವ ಯೋಚನೆ ಮಾಡುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ವಿದ್ಯಾರ್ಥಿ ಜೀವನ ಕಳೆದ ಕೂಡಲೇ ಒಂದೆರಡು ವರ್ಷ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದ ಬಳಿಕ ಸ್ವಂತ ವ್ಯಾಪಾರ ಆರಂಭಿಸುವುದು ಉತ್ತಮ. ಇತರ ಕಂಪೆನಿಗಳಲ್ಲಿ ಕೆಲಸ ಮಾಡುವುದಕ್ಕಿಂತಲೂ ತಮ್ಮ ಸ್ವಂತ ವ್ಯಾಪಾರ ಆರಂಭಿಸುವುದು ಒಳ್ಳೆದು. ಆದರೆ ಮಾಡುವ ವ್ಯಾಪಾರದ ಬಗ್ಗೆ ಹೆಚ್ಚಿನ ಜ್ಞಾನ ಇರಬೇಕು. 

ವಾಣಿಜ್ಯ ಕ್ಷೇತ್ರ ದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೇಗಿದೆ?
ಜಗತ್ತಿನ ಯಾವುದೇ ಮೂಲೆಯಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳುವ ಅವಕಾಶ ವಾಣಿಜ್ಯ ವಿದ್ಯಾರ್ಥಿಗಳಿಗಿದೆ. ಬಿ.ಕಾಂ, ಎಂ.ಕಾಂ, ಬಿಬಿಎಂ ಪದವಿ ಪಡೆದ ವಿದ್ಯಾರ್ಥಿಗಳಿಗೆ ಬಹುತೇಕ ಐಟಿ ಕಂಪೆನಿಗಳಲ್ಲಿ ಉದ್ಯೋಗ ದೊರೆಯುತ್ತದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿರುವಷ್ಟೇ ಅವಕಾಶ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ.

Advertisement

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next