Advertisement

ಕುರುಬ ಸಮುದಾಯ ST ಪಟ್ಟಿಗೆ: ಕೇಂದ್ರಕ್ಕೆ ಶಿಫಾರಸು

10:37 AM Jul 21, 2023 | Team Udayavani |

ಬೆಂಗಳೂರು: ರಾಜ್ಯದ ಮೂರನೇ ಅತಿದೊಡ್ಡ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರಕಾರ ಗುರುವಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಇದರೊಂದಿಗೆ ಸಮುದಾಯದ ಬಹು ಕಾಲದ ಬೇಡಿಕೆಗೆ ಅಲ್ಪಾವಧಿಯಲ್ಲಿಯೇ ಸರಕಾರ ಸ್ಪಂದಿಸಿದೆ.

Advertisement

ಮೈಸೂರಿನ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸಂಶೋಧನ ಸಂಸ್ಥೆ ಈ ಸಂಬಂಧ ಸುದೀರ್ಘ‌ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು. ಆ ವರದಿ ಆಧರಿಸಿ ಸರಕಾರ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ವರದಿಯಂತೆ ಕುರುಬ ಸಮುದಾಯವನ್ನು ಪ.ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ವರದಿಯೊಂದಿಗೆ ಕೇಂದ್ರ ಸರಕಾರದ ಪರಿಶಿಷ್ಟ ಪಂಗಡ ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಕುರುಬ ಸಮುದಾಯಗಳ ಒತ್ತಾಯದ ಮೇರೆಗೆ 2017ರಲ್ಲಿ ಆ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. 2019ರಲ್ಲಿ ಕುಲಶಾಸ್ತ್ರ ಅಧ್ಯಯನಕ್ಕೆ ಹಣ ಬಿಡುಗಡೆ ಮಾಡುವುದರೊಂದಿಗೆ ಪರಿಶಿಷ್ಟ ಪಂಗಡಗಳ ಸಂಶೋಧನ ಸಂಸ್ಥೆಗೆ ವಹಿಸಲಾಗಿತ್ತು. ಇದು 2023ರ ಮಾರ್ಚ್‌ನಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.

ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬುದು ದಶಕಗಳ ಹಿಂದಿನ ಆಗ್ರಹ. ಪಾದಯಾತ್ರೆ ಕೂಡ ಮಾಡಿದ್ದೆವು. ಅದಕ್ಕೆ ಈಗ ಫ‌ಲ ಸಿಕ್ಕಿದೆ.
– ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಜಗದ್ಗುರು, ಕಾಗಿನೆಲೆ

Advertisement

Udayavani is now on Telegram. Click here to join our channel and stay updated with the latest news.

Next