Advertisement

ಚುನಾವಣೆ ವೆಚ್ಚ: ಗರಿಷ್ಠ ನಗದು ಪಾವತಿ 2 ಸಾವಿರ ರೂ.ಗೆ ಇಳಿಸಲು ಪ್ರಸ್ತಾಪ

09:41 PM Nov 06, 2022 | Team Udayavani |

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಚುನಾವಣೆ ಪ್ರಚಾರದ ವೆಚ್ಚವಾಗಿ ಗರಿಷ್ಠ ನಗದು ಪಾವತಿಯನ್ನು ಈಗಿರುವ 10 ಸಾವಿರ ರೂ.ಗಳಿಂದ 2 ಸಾವಿರ ರೂಪಾಯಿಗಳಿಗೆ ಇಳಿಸುವಂತೆ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ಪ್ರಸ್ತಾಪ ಸಲ್ಲಿಸಿದೆ.

Advertisement

ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಅಥವಾ ಘಟಕವು ಮಾಡುವ 2 ಸಾವಿರ ರೂ.ಗಿಂತ ಹೆಚ್ಚಿನ ಎಲ್ಲಾ ಪಾವತಿಗಳನ್ನು ಚೆಕ್‌ ಅಥವಾ ಆನ್‌ಲೈನ್‌, ಡಿಜಿಟಲ್‌ ವಿಧಾನಗಳ ಮೂಲಕ ಪಾವತಿ ಮಾಡಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಕೇಂದ್ರಕ್ಕೆ ಚುನಾವಣಾ ಆಯೋಗ ಪ್ರಸ್ತಾಪಿಸಿದೆ.

ಇದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದಲ್ಲಿ ಹೆಚ್ಚು ಪಾರದರ್ಶಕತೆ ತರಲು ಹಾಗೂ ಅಕ್ರಮಗಳನ್ನು ತಡೆಗಟ್ಟಲು ಈ ಕ್ರಮ ಅಗತ್ಯವಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ. ಪ್ರಸ್ತುತ ನಗದು ರೂಪದಲ್ಲಿ ಅಭ್ಯರ್ಥಿಯು ಪ್ರಚಾರದ ವೆಚ್ಚವಾಗಿ ಗರಿಷ್ಠ 10 ಸಾವಿರ ರೂ. ಪಾವತಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next