Advertisement

“ನಿಷ್ಪಕ್ಷ, ನ್ಯಾಯಸಮ್ಮತ ಚುನಾವಣೆಗೆ ಮುಂದಾಗಿ”: ಮುಖೇಶ್‌ ತಾರಾಚಂದ್‌ ಥಕ್ವಾನಿ

11:40 PM Apr 14, 2023 | Team Udayavani |

ಉಡುಪಿ: ವಿಧಾನಸಭಾ ಚುನಾವಣೆ ನಿಷ್ಪಕ್ಷ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ಅಧಿಕಾರಿಗಳು ಚುನಾವಣ ಆಯೋಗ ಸೂಚಿಸುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಚುನಾವಣ ವೆಚ್ಚ ವೀಕ್ಷಕ ಮುಖೇಶ್‌ ತಾರಾಚಂದ್‌ ಥಕ್ವಾನಿ ತಿಳಿಸಿದರು.

Advertisement

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವೆಚ್ಚ ನಿರ್ವಹಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಅಭ್ಯರ್ಥಿಗಳ ಚುನಾವಣ ವೆಚ್ಚದ ಬಗ್ಗೆ ನಿಗಾ ವಹಿಸಬೇಕು. ರಾಜ್ಯ ಚುನಾವಣ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದ
ರೊಂದಿಗೆ ವೆಚ್ಚ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕು. ಅಭ್ಯರ್ಥಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾ ಜಿಕ ಜಾಲತಾಣಗಳಲ್ಲಿ ನೀಡುವ ಜಾಹೀರಾತುಗಳು ಸೇರಿದಂತೆ ಹಣ ನೀಡಿ ಪ್ರಕಟಿಸುವ ಸುದ್ದಿಯ ಬಗ್ಗೆಯೂ ನಿಗಾ ಇರಿಸಿ ಅದರ ಖರ್ಚು ವೆಚ್ಚದ ಬಗ್ಗೆ ವೆಚ್ಚ ಪರಿಶೀಲನ ಸಮಿತಿಗೆ ಮಾಹಿತಿ ನೀಡಬೇಕು ಎಂದರು.

ಭಾರತೀಯ ಕಂದಾಯ ಸೇವೆಯ ಅಧಿಕಾರಿ ಹಾಗೂ ವೆಚ್ಚ ವೀಕ್ಷಕ ಅಂಕಿತ್‌ ಸೋಮನಿ ಅವರು, ಚುನಾವಣ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ನಿಯಮಗಳನ್ನು ಸರಿಯಾಗಿ ಅರಿತು ಒಂದು ತಂಡದ ರೂಪದಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದಾಗ ಯಶಸ್ವಿಯಾಗಿ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಮಾತನಾಡಿ, ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸಲು ವಿವಿಧ ತಂಡಗಳನ್ನು ಚುನಾವಣ ಆಯೋಗದ ನಿರ್ದೇಶನದಂತೆ ನೇಮಿಸಲಾಗಿದೆ. ಈಗಾಗಲೇ ಎಲ್ಲ ತಂಡಗಳೂ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ ಎಂದರು.

Advertisement

ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಯತೀಶ್‌, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌., ಚುನಾವಣ ವೆಚ್ಚ ವೀಕ್ಷಣೆ ತಂಡದ ಮುಖ್ಯಸ್ಥ ಪ್ರಸನ್ನ ಭಕ್ತ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಬಿ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next