Advertisement

ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ

12:30 AM Jan 20, 2019 | |

ಮಧುಮೇಹದೊಂದಿಗೆ ಜೀವಿಸುವವರಲ್ಲಿ ರಕ್ತದಲ್ಲಿನ ಗ್ಲುಕೋಸ್ ಅಂಶ ಏರು ಪೇರಾಗಿ ಅಲ್ಪಾವಧಿಯ ತೀವ್ರವಾದ  (Acute Complications) ಜೀವಕ್ಕೆ ಮಾರಕವಾಗಬಹುದಾದ ತೊಂದರೆಗಳು ಬರುವ ಸಾಧ್ಯತೆಗಳಿವೆ. ಇವುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಲಭ್ಯವಿರುವ ಚಿಕಿತ್ಸೆಯನ್ನು ಮಧುಮೇಹದೊಂದಿಗೆ ಜೀವಿಸುವವರು ತಿಳಿದುಕೊಳ್ಳಬೇಕಾಗಿರುವುದು ಅತ್ಯವಶ್ಯ.

Advertisement

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರಬಹುದಾದ ಸಂಭಾವ್ಯ 
ಅಲ್ಪಾವಧಿಯ ತೀವ್ರತರವಾದ (Acute Complications) 
ತೊಂದರೆಗಳಾವುವು?

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಅತಿ ಮುಖ್ಯವಾಗಿ ಕಂಡುಬರುವ ಅಲ್ಪಾವಧಿಯ ತೀವ್ರತರವಾದ ತೊಂದರೆಗಳೆಂದರೆ ಇದ್ದಕ್ಕಿದ್ದಂತೆಯೇ ರಕ್ತದಲ್ಲಿ ಗ್ಲುಕೋಸ್‌ ಅಂಶ ಕಡಿಮೆ(ಹೈಪೋಗ್ಲೆçಸೀಮಿಯ) ಆಗುವುದು ಅಥವಾ ರಕ್ತದಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗುವುದು (ಹೈಪರ್‌ಗ್ಲೆçಸೀಮಿಯ). ಇವುಗಳ ಜೊತೆಗೆ ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌( Diabetic Ketoacidosis)  ಮತ್ತು ಹೈಪರಗ್ಲೆçಸೀಮಿಕ್‌ ಹೈಪರ್‌ ಓಸ್ಮೋಲಾರ್‌ ಸಿಂಡ್ರೋಮ್‌ (Hyperglycemic Hyper Osmolar Syndrome) ಎಂಬ ಎರಡು ಅಧಿಕ ತೀವ್ರತರವಾದ ತೊಂದರೆಗಳು ರಕ್ತದಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗುವುದರಿಂದ ಕಂಡುಬರುತ್ತವೆ.

ರಕ್ತದಲ್ಲಿ ಗ್ಲುಕೋಸ್  ಅಂಶ ಕಡಿಮೆ 
(ಹೈಪೋಗ್ಲೆçಸೀಮಿಯ) ಆಗುವುದು 
ಎಂದರೇನು?

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಹಠಾತ್‌ ರಕ್ತದಲ್ಲಿ ಗುÉಕೋಸ್‌ ಅಂಶ ಕಡಿಮೆಯಾಗುವ ಸ್ಥಿತಿಯನ್ನು ಹೈಪೋಗ್ಲೆçಸೀಮಿಯ ಎಂದು ಕರೆಯುತ್ತಾರೆ. ರಕ್ತದಲ್ಲಿ ಗ್ಲೂಕೋಸ್‌ ಅಂಶ 54 mg/dL  ಗಿಂತ ಕಡಿಮೆಯಾದರೆ ವೈದ್ಯಕೀಯ ಪ್ರಾಮುಖ್ಯತೆಯದ್ದಾಗಿ ತುರ್ತಾಗಿ ಚಿಕಿತ್ಸೆಯ ಅವಶ್ಯಕತೆ  ಇರುತ್ತದೆ, ಹಾಗೆಯೇ ರಕ್ತದಲ್ಲಿ ಗ್ಲುಕೋಸ್  ಅಂಶ 70 mg/dL ಕ್ಕಿಂತ ಕಡಿಮೆ ಇದ್ದಲ್ಲಿ ಇದನ್ನು ಎಚ್ಚರಿಕೆ ಎಂದು ಪರಿಗಣಿಸಲಾಗುತ್ತದೆ.

ರಕ್ತದಲ್ಲಿ ಹಠಾತ್‌ ಗ್ಲುಕೋಸ್ 
ಅಂಶ ಕಡಿಮೆಯಾಗಲು 
(ಹೈಪೋಗ್ಲೆçಸೀಮಿಯ) 
ಪ್ರಮುಖ ಕಾರಣಗಳೇನು?

ಇನ್ಸುಲಿನ್‌ ಚುಚ್ಚುಮದ್ದು ಮತ್ತು ಸಲೊ³àನ್ಯುರಿಯ ಗುಳಿಗೆ ತೆಗೆದುಕೊಳ್ಳುವವರಲ್ಲಿ ಹೈಪೋಗ್ಲೆçಸೀಮಿಯಾ ಬರುವ ಅಪಾಯ ಅಧಿಕವಾಗಿದ್ದು ನಿಗದಿತ ಪ್ರಮಾಣಕ್ಕಿಂತ ಅಧಿಕ ಇನ್ಸುಲಿನ್‌ ಮತ್ತು ಮಧುಮೇಹದ ಮಾತ್ರೆಗಳನ್ನು ತೆಗೆದುಕೊಳ್ಳುವುದು ಪ್ರಮುಖ ಕಾರಣ.

ರಕ್ತದಲ್ಲಿ ಗ್ಲುಕೋಸ್  ಅಂಶ ಹಠಾತ್‌ 
ಕಡಿಮೆ (ಹೈಪೋಗ್ಲೆçಸೀಮಿಯ) 
ಯಾದಾಗ  ತುರ್ತಾಗಿ 
ಮಾಡಬೇಕಾದ ಚಿಕಿತ್ಸೆ ಏನು?

ಹೈಪೋಗ್ಲೆçಸೀಮಿಯಾ ಎಂದು ತಿಳಿದಾಕ್ಷಣ ಮಧುಮೇಹದೊಂದಿಗೆ ಜೀವಿಸುವವರು ತಕ್ಷಣ ಪರಿಣಾಮಕಾರಿಯಾಗುಂತೆ‌ 15 ರಿಂದ 20 ಗ್ರಾಮ್‌ಗಳಷ್ಟು ಕಾಬೋìಹೈಡ್ರೇಟ್‌ಯುಕ್ತ ಅಹಾರವನ್ನು ಸೇವಿಸಬೇಕು.  ಇದನ್ನು ಸಕ್ಕರೆ ನೀರು (ತಂಪು ಪೇಯಗಳಲ್ಲದ) ಸಕ್ಕರೆ ಮಿಠಾಯಿ, ಹಣ್ಣಿನ ರಸ ಇವುಗಳ ರೂಪದಲ್ಲಿ ಸೇವಿಸಬಹುದು. ಇದರೊಂದಿಗೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು.

Advertisement

ಯಾವುದೇ ಕಾರಣಕ್ಕೂ ಚಾಕಲೇಟ್‌, ಬಿಸ್ಕತ್‌ ಮತ್ತು ಇತರ ಅಧಿಕ ಕೊಬ್ಬಿನ ಅಂಶವಿರುವ ಆಹಾರವನ್ನು ಸೇವಿಸಬಾರದು. ಇವುಗಳ ಹೀರುವಿಕೆ ದೇಹದಲ್ಲಿ ಅತಿ ನಿಧಾನವಾಗಿ ಆಗುವುದರಿಂದ ಹೈಪೋಗ್ಲೆçಸೀಮಿಯವನ್ನು ತತ್‌ಕ್ಷಣದಲ್ಲಿ ನಿರ್ವಹಣೆ ಮಾಡಲು ಕಷ್ಟವಾಗಬಹುದು.

ಸುಮಾರು 10 ರಿಂದ 20 ನಿಮಿಷಗಳ ನಂತರ ಪುನಃ ರಕ್ತದಲ್ಲಿನ ಗುÉಕೋಸ್‌ ಪ್ರಮಾಣವನ್ನು ಪರೀಕ್ಷಿಸಿ ಅದರ ಪ್ರಮಾಣ 70 mg/dL  ಕ್ಕಿಂತ ಕಡಿಮೆ ಇದ್ದಲ್ಲಿ ಪುನ: ಮೇಲಿನ ಚಿಕಿತ್ಸೆಯನ್ನು ಪುನಾರವರ್ತಿಸಬೇಕು. ಹಾಗೂ ರಕ್ತದಲ್ಲಿ ಗುÉಕೋಸ್‌ ಅಂಶ ಮತ್ತೂ ಕಡಿಮೆಯಾಗದಂತೆ ತಡೆಯಲು ಹೆಚ್ಚು ಪರಿಣಾಮಕಾರಿಯಾಗಿರುವ ಕಾಬೋìಹೈಡ್ರೆಟ್‌ ಆಹಾರಗಳಾದ ಇಡ್ಲಿ, ಅನ್ನ, ಹಣ್ಣು, ಹಾಲು, ಊಟದ ಸಮಯ ಆಗಿದ್ದಲ್ಲಿ ಊಟ ಇತ್ಯಾದಿಗಳನ್ನು ಮಾಡಬೇಕು.

– ಮುಂದುವರಿಯುವುದು

– ಪ್ರಭಾತ್‌ ಕಲ್ಕೂರ ಎಂ., 
ಯೋಜನಾ ನಿರ್ವಾಹಕರು,
ವಿಶ್ವ ಮಧುಮೇಹ ಪ್ರತಿಷ್ಠಾನ‌ 15: 941, ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, ಮಣಿಪಾಲ.

 

Advertisement

Udayavani is now on Telegram. Click here to join our channel and stay updated with the latest news.

Next