Advertisement

ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ

04:49 PM May 09, 2017 | Team Udayavani |

ಕಲಬುರಗಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 2 ಲಕ್ಷ ಮಕ್ಕಳು ಇದ್ದು, ಇವರಿಗೆ ಕಡ್ಡಾಯವಾಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ಕೊಡಿಸುವುದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಪಾಲಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌ ಹೇಳಿದರು. 

Advertisement

ನಗರದ ಖಾದ್ರಿ ಚೌಕ್‌ ಪ್ರದೇಶದ  ಜಾನಿ ರಜಾಕ್‌ ನಗರದ ಅಂಗನವಾಡಿ ಕೇಂದ್ರ-2ರಲ್ಲಿ ನಾಲ್ಕನೇ ಹಂತದ ಇಂದ್ರಧನುಷ್‌ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಹಲವಾರು ಬಾರಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಲಾಗುವುದು.

ಆದರೂ ಅನೇಕ ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಾರೆ. ಅಂತವರನ್ನು ಗುರುತಿಸಿ ಇಂದ್ರಧನುಷ್‌ ವಿಶೇಷ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ನೀಡಲಾಗುವುದು ಎಂದರು. ಎರಡು ವರ್ಷದೊಳಗಿನ 12,839 ಮಕ್ಕಳಿಗೆ ಮತ್ತು 2834 ಲಸಿಕೆ ವಂಚಿತ ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಲಾಗುತ್ತಿದೆ.

ಮುಂದಿನ ನಾಲ್ಕು ತಿಂಗಳು ಕಾಲ ಪ್ರತಿ ತಿಂಗಳು 7ನೇ ತಾರೀಖೀನಿಂದ ಒಂದು ವಾರಗಳ ಕಾಲ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ಡಾ| ಶಿವರಾಜ ಸಜ್ಜನಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಶಂಕರಸಿಂಗ್‌, ಜಿಪಂ ಸಿಇಒ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಡಾ| ಅನಿಲಕುಮಾರ ತಾಳಿಕೋಟಿ, ಡಾ| ಎಂ.ಕೆ. ಪಾಟೀಲ, ಡಾ| ರುಧ್ರವಾಡಿ, ಶ್ರೀಕಾಂತ ಕುಲಕರ್ಣಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next