Advertisement
ಮಂಗಳವಾರ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನ್ಯಾಶನಲ್ ಸ್ಕಿಲ್ ಡೆವಲಪ್‍ಮೆಂಟ್ ಮತ್ತು ಎಥ್ನೋಟೆಕ್ ಅಕಾಡೆಮಿ ಸಹಯೋಗದಲ್ಲಿ ಪೂಜ್ಯ ಬಸವರಾಜ ದೊಡ್ಡಪ್ಪ ಅಪ್ಪ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
Related Articles
Advertisement
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, 2014ರ ಬಳಿಕ ಭಾರತ ದೇಶದಲ್ಲಿ ಸಾಕಷ್ಟು ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದು ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಟಿಸಲು ಸಹಕಾರ ನೀಡುತ್ತಿದೆ. ಹೀಗಾಗಿ ಭಾರತದಲ್ಲಿನ ಯುವ ಶಕ್ತಿಗಳು ಹೆಚ್ಚಿನ ಕೌಶಲ್ಯ ತರಬೇತಿ ಪಡೆದು ವಿಶ್ವದಲ್ಲಿ ರಾಷ್ಟ್ರದ ಹೆಸರು ಪಸರಿಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯವು ಯುವಕರಿಗೆ ಕೌಶಲ್ಯ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡುವ ಕೆಲಸ ಮಾಡುತ್ತದೆ. ತಂತ್ರಜ್ಞಾನ ಮತ್ತು ಕೌಶಲ ಕ್ಷೇತ್ರದಲ್ಲಿ ಭಾರತ ಇಂದು ಸಾಕಷ್ಟು ಪ್ರಗತಿ ಸಾಧಿಸಿದೆ. ತಾಂತ್ರಿಕ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿದ್ದು, ಈಗ ಎಲ್ಲವೂ ಭಾರತದಲ್ಲಿಯೇ ಲಭಿಸುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ದೇಶದಲ್ಲಿ ಈಗ 1.25 ಲಕ್ಷ ಸ್ಟಾರ್ಟ್-ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 125 ಯೂನಿಕಾರ್ನ್ ಕಂಪನಿಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅಮೆರಿಕದ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಭಾರತ ಸಂಜಾತ ಶೇ.31ರಷ್ಟು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
2047ಕ್ಕೆ ಭಾರತ ವಿಶ್ವಗುರು: ಸ್ವಾತಂತ್ರ್ಯದ ಶತಮಾನೋತ್ಸವದ ವರ್ಷವಾಗಲಿರುವ 2047ರ ಹೊತ್ತಿಗೆ ಇಡೀ ವಿಶ್ವಕ್ಕೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.
ನವದೆಹಲಿಯ ಎಐಸಿಟಿಇ ಮುಖ್ಯಸ್ಥ ಪ್ರೋ. ಟಿ.ಜಿ ಸೀತಾರಾಮ್ ಮಾತನಾಡಿ, ತಂತ್ರಜ್ಞಾನ ಎಂಬುದು ಮಾನವ ಕಲ್ಯಾಣಕ್ಕೆ ಬಳಕೆಯಾಗಬೇಕು. ಆ ನಿಟ್ಟಿನಲ್ಲಿ ಇಂದು ಭಾರತ ಇಡೀ ಜಗತ್ತಿನ ಗಮನ ಸೆಳೆದಿದೆ. ಕೋವಿಡ್ ಸಂದರ್ಭದಲ್ಲಿ ಭಾರತ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಜಗತ್ತಿನ 100ಕ್ಕೂ ಹೆಚ್ಚು ದೇಶಗಳಿಗೆ ಉಚಿತವಾಗಿ ಒದಗಿಸುವ ಮೂಲಕ ಮಾನವ ಕಲ್ಯಾಣ ತತ್ವ ಎತ್ತಿ ಹಿಡಿಯಲಾಯಿತು. ಈ ತತ್ವಕ್ಕೆ ಒತ್ತುಕೊಡುವ ಮೂಲಕ ಎಐಸಿಟಿಇ ವ್ಯಾಪ್ತಿಯ ಎಲ್ಲ ತಾಂತ್ರಿಕ ವಿದ್ಯಾಲಯಗಳಲ್ಲಿ ವಿಶ್ವಮಾನವತಾ ಮೌಲ್ಯಗಳನ್ನು ಕಡ್ಡಾಯವಾಗಿ ಬೋಧಿಸುವಂತೆ ನಿಯಮ ರೂಪಿಸಲಾಗಿದೆ ಎಂದರು.
ಬಿಜಿಎಸ್ ಮತ್ತು ಎಸ್.ಜೆ.ಬಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದರು. ಎಚ್.ಕೆ.ಇ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐಎಸ್‍ಟಿಇ ಅಧ್ಯಕ್ಷ ಪ್ರತಾಪ ಸಿನ್ಹ ಕೆ. ದೇಸಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಡಿಎಸಿಇಕೆ ಸಂಯೋಜಕ ಬಸವರಾಜ್ ಖಂಡರಾವ್, ಹೆಚ್.ಕೆ.ಇ ಸಂಸ್ಥೆಯ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ್, ಕಾರ್ಯದರ್ಶಿ ಡಾ. ಜಗನ್ನಾಥ್ ಬಿಜಾಪುರೆ, ಸಹ ಕಾರ್ಯದರ್ಶಿ ಡಾ. ಮಹಾದೇವಪ್ಪ ರಾಮಪುರೇ, ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಬಸವರಾಜ್ ಗಾದಗೆ ಸೇರಿ ಉಪ ಪ್ರಚಾರ್ಯರು, ಸಿಎಓ, ಡೀನರು, ಪ್ರಾಧ್ಯಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಥ್ನೋಟೆಕ್ ಗ್ರೂಪ್ ಆಫ್ ಕಂಪನಿಯ ಮುಖ್ಯಸ್ಥ ಡಾ.ಕಿರಣ ರಾಜಣ್ಣ ಸ್ವಾಗತಿಸಿದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಶಿಕಾಂತ ಮೀಸೆ ವಂದಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸತ್ಕಾರ: ಎಚ್.ಕೆ.ಇ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅವರ ಸಾಧನೆ ಗುರುತಿಸಿ ಎಥ್ನೋಟೆಕ್ ಅಕಾಡೆಮಿ ವತಿಯಿಂದ ವಿಶೇಷವಾಗಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಅದೇ ರೀತಿ ನವದೆಹಲಿಯ ಎಐಸಿಟಿಇ ಮುಖ್ಯಸ್ಥ ಪ್ರೋ. ಟಿ.ಜಿ ಸೀತಾರಾಮ್, ಅಟಲ್ ಬಿಹಾರಿ ವಾಜಪೇಯಿ ನಿರ್ದೇಶಕ ಐಐಐಟಿಎಂ ಪ್ರೋ. ನಿವಾಸ್ ಸಿಂಗ್, ಚೆನೈನ ಅಣ್ಣ ವಿವಿಯ ಉಪಕುಲಪತಿ ಡಾ. ಆರ್. ವೇಲರಾಜ್, ಹರಿಯಾಣದ ಸ್ಪೋರ್ಟ್ಸ್ ವಿವಿಯ ಸುರ್ಜಿತ್ ಸಿಂಗ್ ದೇಸ್ವಾಲ್ ಹಾಗೂ ಶರಣಬಸವ ವಿವಿಯ ಡೀನರಾದ ಲಕ್ಷ್ಮಿ ಪಾಟೀಲ್ ಮಾಕಾ ಸೇರಿ ಅನೇಕ ಸಾಧಕರಿಗೆ ಇದೆ ವೇಳೆ ಗೌರವ ಸನ್ಮಾನ ಮಾಡಲಾಯಿತು.