Advertisement

6 ಸಾವಿರ ರೂ. ಸಹಾಯಧನಕ್ಕೆ  24,258 ಫಲಾನುಭವಿಗಳು!

11:02 AM Mar 02, 2019 | |

ಕುಷ್ಟಗಿ: ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗಾಗಿ ವಾರ್ಷಿಕವಾಗಿ 6,000 ರೂ. ಸಹಾಯಧನ ನೀಡುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ (ಪಿಎಂ-ಕಿಸಾನ್‌) ಯೋಜನೆಗೆ ತಾಲೂಕಿನಲ್ಲಿ 24,258 ಸಣ್ಣ ಅತಿ ಸಣ್ಣ ಹಿಡುವಳಿ ಹೊಂದಿರುವ ಅರ್ಹ ರೈತರನ್ನು ಗುರುತಿಸಲಾಗಿದೆ.

Advertisement

ತಾಲೂಕಿನ ನಾಲ್ಕು ಹೋಬಳಿಗಳ ಪೈಕಿ ತಾವರಗೇರಾ 4,143, ಹನುಮಸಾಗರ,7,003, ಹನುಮನಾಳ 5,622 ಹಾಗೂ ಕುಷ್ಟಗಿ-7,490 ರೈತರನ್ನು ಗುರುತಿಸಿದೆ. ಈಗಾಗಲೇ 9ಸಾವಿರ ರೈತರ ಅರ್ಜಿಗಳು ಬಂದಿದ್ದು, 7 ಸಾವಿರ ಅರ್ಜಿಗಳನ್ನು ಅಪ್‌ಲೋಡ್‌ ಆಗಿದ್ದು, ಶೇ.30ರಷ್ಟು ಪ್ರಗತಿ ಕಂಡಿದೆ.

ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ವಾರ್ಷಿಕ ಮೂರು ಕಂತುಗಳ ಒಟ್ಟು 6,000 ರೂ. ಗಳನ್ನು ಪ್ರತಿ ಕಂತು 2,000 ರೂ.ನಂತೆ ಏಪ್ರಿಲ್‌ ಅಂತ್ಯದ ವೇಳೆಗೆ ಎರಡು ಕಂತು 4,000 ರೂ. ಗಳನ್ನು ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ಹಾಕುವ ಗುರಿ ಹೊಂದಿದೆ. ತಾಲೂಕಿನಲ್ಲಿ ವಾರ್ಷಿಕ 6,000 ರೂ. ನಂತೆ ಒಟ್ಟು 24,258 ರೈತರಿಗೆ 14, 55,48,000 ರೂ. ಜಮೆಯಾಗಲಿದೆ. ಮೊದಲ ಕಂತು 4,85,16,000 ರೂ.ಜಮೆ ಆಗಲಿದೆ. ಈಗಾಗಲೇ ಕೃಷಿ ಇಲಾಖೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಮಾಹಿತಿ ಸಂಗ್ರಹಿಸಿ, ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ನಡೆದಿದೆ.

ನಮೂನೆಗಳು: ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ಅರ್ಹ ರೈತರು ಹೆಸರು ನೋಂದಾಯಿಸಿಕೊಳ್ಳಲು ಅನುಬಂಧ ಸಿ, ಡಿ ಹಾಗೂ ಇ ಮೂರು ವಿವಿಧ ಅರ್ಜಿ ನಮೂನೆಗಳಿವೆ.

ಫಲಾನುಭವಿ ಪಟ್ಟಿಯಲ್ಲಿ ಹೆಸರಿದ್ದು, ಯೋಜನೆ ಫಲ ಪಡೆಯಲು ಒಪ್ಪುವುದಕ್ಕೆ ನಮೂನೆ -ಸಿ, ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದು, ಅದನ್ನು ಸೇರಿಸಲು ನಮೂನೆ-ಡಿ ಹಾಗೂ ನೆರವು ಅಗತ್ಯ ಇಲ್ಲ ಎಂದಲ್ಲಿ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-ಇ ಅರ್ಜಿಗಳಿವೆ. ಇದನ್ನು ಸ್ಥಳದಲ್ಲಿ ದೃಢೀಕರಿಸಿ ನೀಡುವುದಾಗಿದೆ. ಅರ್ಜಿಯೊಂದಿಗೆ ಆಧಾರ್‌ ಕಾರ್ಡ್‌, ಪಹಣಿ, ಬ್ಯಾಂಕ್‌ ಪಾಸ್‌ ಪುಸ್ತಕ ದಾಖಲೆ, ಆದಾಯ ಪ್ರಮಾಣ ಪತ್ರ (ಎಸ್ಸಿ-ಎಸ್ಟಿ ವರ್ಗಕ್ಕೆ) ಹಾಗೂ ಇತ್ತೀಚಿನ ಭಾವಚಿತ್ರ ಲಗತ್ತಿಸಿ ನೋಂದಣಿ ಮಾಡಿಕೊಂಡಿರುವ ಅರ್ಹ ರೈತರಿಗೆ ಈ ಸೌಲಭ್ಯ ಸಿಗಲಿದೆ.

Advertisement

ರೈತರು ಅಗತ್ಯ ದಾಖಲಾತಿಗಳನ್ನು ನೀಡಿ ಹೆಸರು ನೋಂದಾಯಿಸಬಹುದಾಗಿದೆ. ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದವರು ಸದ್ಯ ನಿರಾಳರಾಗಿದ್ದು, ಗುರುತಿನ ಸಂಖ್ಯೆ ನಮೂದಿಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪ್ರಕ್ರಿಯೆಗೆ ಸರಳೀಕರಣ ವ್ಯವಸ್ಥೆಗೆ ಗುರುತಿನ ಸಂಖ್ಯೆ ಇರುವ ರೈತರ ಅರ್ಹ ಫಲಾನುಭವಿಗಳ ವಿವರದ ಪಟ್ಟಿಯನ್ನು,ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಅಟಲ್‌ ಜೀ ಜನಸೇವಾ ಕೇಂದ್ರ ಹಾಗೂ ಗ್ರಾಪಂ ನೋಂದಣಿಗೆ ಅವಕಾಶ ಕಲ್ಪಿಸಿದೆ.

ಈ ನೋಂದಣಿ ಕೇಂದ್ರಗಳಲ್ಲದೇ ಝರಾಕ್ಸ್‌ ಅಂಗಡಿಗಳಲ್ಲೂ ನಮೂನೆಗಳ ಲಭ್ಯವಿದೆ. ಗುರುತಿನ ಸಂಖ್ಯೆ ಅರ್ಜಿ ನಮೂನೆಯಲ್ಲಿ ನಮೂದಿಸುವಂತಾಗಲು, ಆಯಾ ನೋಂದಣಿ ಕೇಂದ್ರಗಳಲ್ಲಿ ಮಾಹಿತಿಗಾಗಿ ಈಗಾಗಲೇ ನಾಮ ಫಲಕಕ್ಕೆ ಅಂಟಿಸಲಾಗಿದ್ದು, ಝರಾಕ್ಸ್‌ ಅಂಗಡಿಗಳಿಗೆ ಆಯಾ ಗ್ರಾಪಂ, ಪಟ್ಟಣ ಅನುಸಾರ ಫಲಾನುಭವಿ ಪಟ್ಟಿ ನೀಡಲಾಗಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಸಿ ನಮೂನೆ ಅರ್ಜಿ ಲಭ್ಯವಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ರೈತರಿಗೆ ಸದ್ಯ ಡಿ. ನಮೂನೆ ಅಲಭ್ಯವಾಗಿದೆ. ಸದರಿ ಪಟ್ಟಿಯಲ್ಲಿ ಸೇರಿಸಲು ಕೃಷಿ ಇಲಾಖೆ, ತಹಶೀಲ್ದಾರ್‌ ಕಚೇರಿಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಟರುವಿಟ್ಟುಕೊಂಡಿದ್ದು, ಸರಿಯಾದ ಮಾಹಿತಿ ನೀಡದಿರುವುದು ರೈತರ ಅಳಲಾಗಿದೆ.

ಪ್ರಧಾನಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ನೋಂದಣಿ ಪ್ರಕ್ರಿಯೆ ಶುರುವಾಗಿಲ್ಲ, ಬಿಜಕಲ್‌ ಗ್ರಾಪಂನಲ್ಲಿ ಮಾತ್ರ ಸಹರಿಕರಿಸದ ಹಿನ್ನೆಲೆಯಲ್ಲಿ ತಾಪಂ ಇಒ ಗಮನಕ್ಕೆ ತರಲಾಗಿದೆ.
ವೀರಣ್ಣ ಕಮತರ,
ಸಹಾಯಕ ಕೃಷಿ ನಿರ್ದೇಶಕ

ಮಂಜುನಾಥ ಮಹಾಲಿಂಗಪುರ 

Advertisement

Udayavani is now on Telegram. Click here to join our channel and stay updated with the latest news.

Next